ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹುರುಳಿ

ಹಾಳ್ ಮ್ಯಾಸರಹಟ್ಟಿಯ ಗರ್ಭಿಣಿಯನ್ನ 108 ಆಂಬ್ಯುಲೆನ್ಸ್ ನಲ್ಲಿ ಹೆರಿಗೆ ಶಸ್ತ್ರಚಿಕಿತ್ಸೆಗೆಂದು ಕರೆ

ತರುವ ಮಾರ್ಗ ಮಧ್ಯೆದಲ್ಲೇ ಅತೀವ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಆಂಬ್ಯುಲೆನ್ಸ್ ಸಿಬ್ಬಂದಿ ವಾಹನ ದಲ್ಲೇ ಸುರಕ್ಷಿತ ಹೆರಿಗೆ ಮಾಡಿಸಿದ್ದು, ತಾಯಿ -ಮಗು ಆರೋಗ್ಯವಾಗಿದ್ದಾರೆ.

ಮ್ಯಾಸರಹಟ್ಟಿಯ 25 ವರ್ಷದ ರೂಪಾ ಅವರನ್ನ ಹೆರಿಗೆ ಶಸ್ತ್ರಚಿಕಿತ್ಸೆಗೆಂದು ಆಂಬ್ಯುಲೆನ್ಸ್ ವಾಹನದಲ್ಲಿ ಚಿಕ್ಕಜೋಗಿಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತರುವಾಗ, ಎಕಾಏಕಿ ಆ ಗರ್ಭೀಣಿ ಮಹಿಳೆಗೆ ರಕ್ತ ದೊತ್ತಡ ಹೆಚ್ಚಾಗಿದ್ದರಿಂದ ಸುರಕ್ಷಿತ ಹೆರಿಗೆ ಶಸ್ತ್ರಚಿಕಿತ್ಸೆ ನೀಡೋ ದೃಷ್ಟಿಯಿಂದ ಆರೋಗ್ಯ ಕೇಂದ್ರದ ವೈದ್ಯರು ಗರ್ಭಿಣಿಯನ್ನ ಜಗಳೂರು ತಾಲೂಕು ಆಸ್ಪತ್ರೆಗೆ ಹೋಗುವಂತೆ ಸೂಚಿಸಿ, 108 ಆಂಬ್ಯುಲೆನ್ಸ್ ವಾಹನದಲ್ಲಿ ಕಳಿಸಿಕೊಟ್ಟಿದ್ದಾರೆ.

ಆ ಮಾರ್ಗ ಮಧ್ಯದಲ್ಲಿ ಹೆರಿಗೆ ನೋವು ಹೆಚ್ಚಾಗಿದ್ದ ರಿಂದ ಆರೋಗ್ಯ ಸಹಾಯಕಿ ಜ್ಯೋತಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದು, ನಿನ್ನೆಯ ದಿನ ಸಂಜೆ 6.25ಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿ-ಮಗು ಆರೋಗ್ಯವಾಗಿದ್ದು, 108ರ ಚಾಲಕ ಖಾಜಾ ಸಾಬ್ ಇಬ್ಬರನ್ನು ಮರಳಿ ಚಿಕ್ಕಜೋಗಿಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ.

Leave A Reply