ಕುಂದಗೋಳ:

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮ ಪಂಚಾಯಿತಿ ಮತ್ತು ಚಾಕಲಬ್ಬಿ ಗ್ರಾಮ ಪಂಚಾಯಿತಿಯ ಸಮುದಾಯದ ಹಳ್ಳಿಯ ಜನರಿಗೆ ಉಚಿತವಾಗಿ ಮಾಸ್ಕ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಅಕ್ಷರ ಫೌಂಡೇಶನ್ ಜಿಲ್ಲಾ ಸಂಯೋಜಕರಾದ ಹನಮಂತ ಮಸಾಲಿ ಮಾತನಾಡಿ ಕೊರೋನಾ ಬಂದು ಎಲ್ಲರಿಗೂ ಆರೋಗ್ಯ , ಆರ್ಥಿಕ‌ ಮತ್ತು ಶೈಕ್ಷಣಿಕವಾಗಿ ತೊಂದರೆ ಉಂಟು ಮಾಡಿದೆ. ಎಲ್ಲದಕ್ಕೂ ಮುಖ್ಯವಾಗಿ ಆರೋಗ್ಯ ಕಾಪಾಡಿಕೊಳ್ಳುವುದು
ಅತಿ ಮುಖ್ಯವಾಗಿದೆ. ಕೊರೋನಾ ತಡೆಗಟ್ಟಲು ಮಾಸ್ಕ ದರಿಸಿ, ಸಾಮಾಜಿಕ ಅಂತರ ಪಾಲಿಸಿ, ಕೈ ಶುಚಿಯಾಗಿರಿಸಿ ಕೊಳ್ಳುವುದರಿಂದ ಕರೊನಾ ತಡೆಗಟ್ಟಬಹುದು. ಧಾರವಾಡ ಜಿಲ್ಲೆಯಾದ್ಯಂತ ವಿಭಾ ಸಂಸ್ಥೆಯ ಸಹಯೋಗದಲ್ಲಿ ಸುಮಾರು 9000 ಕ್ಕೂ ಹೆಚ್ಚು ಮಾಸ್ಕಗಳನ್ನು ಸ್ವಯಂ ಸೇವಕರಿಗೆ ಮತ್ತು ಜನರಿಗೆ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಜಿ. ಎನ್. ಮಠಪತಿ ಯವರು ಸ್ವಯಂ ಸೇವಕರಿಗೆ ಮಾಸ್ಕ ವಿತರಿಸಿ ಮಾತನಾಡಿ ಕೊರೋನಾ ತಡೆಯಲು ಉತ್ತಮ ಗುಣಮಟ್ಟದ ಮಾಸ್ಕಗಳನ್ನು ನೀಡುತ್ತಿರುವ ವಿಭಾ ಸಂಸ್ಥೆ ಮತ್ತು ಅಕ್ಷರ ಫೌಂಡೇಶನ್ ಕಾರ್ಯ ಶ್ಲಾಘನೀಯ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ರಾಜೇಂದ್ರ ಶಿರಮಣ್ಣವರ, ಶ್ರೀಮತಿ ಫಕ್ಕೀರವ್ವ ಹರಿಜನ, ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಯು. ಸಿ. ತುಪ್ಪದಗೌಡ್ರ, ಶ್ರೀ ಎಫ್. ಎ. ನದಾಫ, ಮುಖಂಡರ ಶ್ರೀ ಚಂದ್ರಶೇಖರ ಜುಟ್ಟಲ್, ಕ್ಷೇತ್ರ ಸಮನ್ವಯಾಧಿಕಾರಿ ಶ್ರೀ ಶಿವಾಜಿ ರೋಡೆ, ಪವಾಡ ಬಯಲು ಖ್ಯಾತಿಯ ಶ್ರೀ ಮಂಜುನಾಥ ಬಾರಕೇರ, ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಶ್ರೀ ದಾದಾಫೀರ್ ಕಣವಿ, ಸ್ವಯಂ ಸೇವಕರಾದ ರೇಖಾ ಕಟಗಿ,ಪವಿತ್ರಾ ಸತ್ತಿಗೌಡ್ರ, ಮಲ್ಲಪ್ಪ ಬಾರಕೇರ , ಗುರುನಾಥ ಹೊನ್ನಿಹಳ್ಳಿ, ಸುನಿತಾ ತೋಟದ, ಲಕ್ಷ್ಮಿ ಕುರಹಟ್ಟಿ , ಶ್ರೀಮತಿ ಯಲ್ಲಮ್ಮ, ಹಾಗೂ ಗ್ರಾ. ಪಂ. ಸದಸ್ಯರು, ಗ್ರಾಮಸ್ಥರು ,ಗುರುಗಳು ಉಪಸ್ಥಿತರಿದ್ದರು.

IMG-20210619-WA0015.jpg

Email

Basavaraj Guddadakeri

About Author

Basavaraj Guddadakeri

Leave A Reply