೨೨ರಿಂದ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ದರ್ಶನಕ್ಕೆ ಮುಕ್ತ ಅವಕಾಶ.

0

ರಾಯಚೂರು – ಕೊರೊನಾ ಸೋಂಕಿನ ಎರಡನೇ ಅಲೆ‌ ಹಿನ್ನೆಲೆಯಲ್ಲಿ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ದರ್ಶನವನ್ನ ಭಕ್ತರಿಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆರೋಗ್ಯ ಇಲಾಖೆ ಮಾರ್ಗಸೂಚಿಗಳ ಅನುಸಾರವಾಗಿ ಬರುವ ಜೂ.೨೨ರಿಂದ ಶ್ರೀರಾಘವೇಂದ್ರ ಸ್ವಾಮಿ ಮೂಲ ಬೃಂದಾವನವನ್ನ ದರ್ಶನಕ್ಕೆ ಮುಕ್ತವಾಗಲಿದೆ. ಮಹಾಮಾರಿ ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ರಾಘವೇಂದ್ರ ಸ್ವಾಮಿಗಳು ಭಕ್ತರ ದರ್ಶನವನ್ನ ಸ್ಥಗಿತ ಮಾಡಲಾಗಿತ್ತು.

ಆದ್ರೆ ಕ್ರಮೇಣವಾಗಿ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದ್ದು, ಆರೋಗ್ಯ ಇಲಾಖೆ ಮಾರ್ಗಸೂಚಿಗಳನ್ವಯ ಕೆಲವು ನಿಯಮಗಳು ಸಡಲಿಕೆ ಮಾಡಿರುವ ಕಾರಣದಿಂದ ಬರುವ ಜೂ.೨೨ರಿಂದ ರಾಯರ ದರ್ಶನಕ್ಕೆ ಭಕ್ತರಿಗೆ ಮುಕ್ತವಾಗಲಿದೆ. ದರ್ಶನಕ್ಕೆ ಸಮಯ ನಿಗದಿ ಮಾಡಿದ್ದು, ಬೆಳಿಗ್ಗೆ ೬ರಿಂದ ಮಧ್ಯಾಹ್ನ ೨ ಗಂಟೆ ಹಾಗೂ ಸಂಜೆ ೪ರಿಂದ ರಾತ್ರಿ ೯ ಗಂಟೆಯವರ ಅವಧಿಯಲ್ಲಿ ಶ್ರೀಮಠಕ್ಕೆ ಆಗಮಿಸಿ ರಾಯರ ದರ್ಶನ ಪಡೆಯಬಹುದಾಗಿದೆ. ದರ್ಶನ ಸಮಯದಲ್ಲಿ ಭಕ್ತರು ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನ ಪಾಲನೆ ಮಾಡಬೇಕಾಗಿದೆ. ಮಂತ್ರಾಲಯಕ್ಕೆ ಬಂದು ಮೂಲ ಬೃಂದಾವನ ದರ್ಶನ ಪಡೆಯಲು ಸಾಧ್ಯವಾಗದ ಭಕ್ತರು ಶ್ರೀಮಠದ ಅಧಿಕೃತ ವೆಬ್ ಸೈಟ್ www.srsmatha.org/online ಲಿಂಕ್ ಕ್ಲಿಕ್ ಮಾಡಿ ರಾಯರ ದರ್ಶನ ಪಡೆಯಬಹುದು ಜತೆಗೆ ಸೇವೆಯನ್ನ ಸಲ್ಲಿಸಬಹುದು ಎಂದು ಶ್ರೀಮಠದ ವ್ಯವಸ್ಥಾಪಕರು ತಿಳಿಸಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

 

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply