ಬೆಳಗಾವಿ- ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಸಿಡಿ ಬಹಿರಂಗ ಪ್ರಕರಣದ ಹಿನ್ನಲಯಲ್ಲಿ ಸರಿಯಾದ ರೀತಿಯಲ್ಲಿ ತನಿಖೆ ನಡಯುತ್ತಿಲ್ಲ ಎನ್ನುವ ಆರೋಪವನ್ನು ಮಾಜಿ ಮುಖ್ಯಮಂತ್ರಿ ಜಗದೇಶ್ ಶೆಟ್ಟರ್ ತಳ್ಳಿ ಹಾಕಿದ್ದಾರೆ. ಬೆಳಗಾವಿಯಲ್ಲಿ ಇಂದು ಮಾತನಾಡಿದ ಅವರು  ಎಸ್ ಐಟಿ ಸರ್ಕಾರದ ಕಪಿಮುಷ್ಟಿಯಲ್ಲಿದೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದ ಅವರು, ಎಸ್‌ಐಟಿ ಸರಿಯಾದ ರೀತಿ ಪಾರದರ್ಶಕ ಕೆಲಸ ಮಾಡುತ್ತಿದೆ.ಬೆಳಗ್ಗೆಯಿಂದ ಸಾಯಂಕಾಲ ವಿಚಾರಣೆ ನಡೆಯುತ್ತಿದೆ, ಪ್ರಶ್ನೆ ಕೇಳುತ್ತಿದ್ದಾರೆ, ಎಸ್‌ಐಟಿ ಮೇಲೆ ಸಂಶಯ ಪಡುವಂತಹದ್ದೇನಿಲ್ಲ ಎಂದಿದ್ದಾರೆ.

ಇದೇ ವೇಳೆಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹ ವಿಚಾರವಾಗಿ ಪ್ರತಿಕ್ರೀಯೆ ನೀಡದ ಅವರು, ಸರ್ಕಾರ ವಿರುದ್ಧ ಮಾತನಾಡಲು ವಿಪಕ್ಷಗಳಿಗೆ ಯಾವುದೇ ವಿಷಯವಿಲ್ಲ. ಹೀಗಾಗಿ ಆಡಳಿತ ಯಂತ್ರ ಕುಸಿದಿದೆ ಅಂತಾ ಹೇಳ್ತಿದಾರೆ ಮೊನ್ನೆ ಬಜೆಟ್ ಅಧಿವೇಶನದಲ್ಲಿ ಭಾಷಣ, ಚರ್ಚೆ ಮಾಡಲಿಲ್ಲ,

ಜನಪರವಾದ ಧ್ವನಿ ಎತ್ತುವ ಕೆಲಸವನ್ನು ಮಾಡಲಿಲ್ಲ, ಯಾವುದೇ ವಿಚಾರಕ್ಕೆ ಸದನದ ಬಾವಿಗಿಳಿದು ಧರಣಿ ಕುಳಿತ್ರಿ ಎಲ್ಲಾ ಕಲಾಪವನ್ನು ಹಾಳು ಮಾಡುವ ಕೆಲಸ ಸಿದ್ದರಾಮಯ್ಯ ಮಾಡಿದ್ದಾರೆ. ಆಡಳಿತ ಯಂತ್ರ ಕುಸಿದಿದೆ ಎಂಬ ವಿಚಾರ ಅಲ್ಲಿ ಹೇಳಬಹುದಿತ್ತಲ್ಲಾ, ಹಸಿಸುಳ್ಳು ಹೇಳೋದನ್ನು ನಿಲ್ಲಿಸಿ ಜನ ನಿಮ್ಮನ್ನು ನಂಬುವುದಿಲ್ಲ, ಕಾಂಗ್ರೆಸ್ ಆಲ್ಮೋಸ್ಟ್  ಝೀರೋಗೆ ಬರ್ತಾ ಇದೆ, ಇಡೀ ದೇಶದಲ್ಲಿ ಕಾಂಗ್ರೆಸ್ ಝೀರೋ ಆಗಿದೆ, ರಾಜ್ಯದಲ್ಲೂ ಝೀರೋ ಆಗ್ತದೆ. ಈ ರೀತಿ ಮಾತನಾಡಿ ಏನೋ ಸ್ವಲ್ಪ ಉಳಿದ ಅಸ್ತಿತ್ವ ಕಳೆದುಕೊಳ್ತೀರಿ ಎಂದು ಎಚ್ಚರಿಕೆ ನೀಡಿದ್ದಾರೆ.

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply