ಚಾಮರಾಜನಗರ- ಮಾಹಾ ಮಾರಿ ಕರೋನಾ ವಿರುದ್ಧ ಹೋರಾಡುತ್ತಿರುವ ದೇಶಕ್ಕೆ ಒಂದು ರೀತಿಯಲ್ಲಿ ಸಂಜೀವಿನಿ ಸಿಕ್ಕಿದೆ. ಅದುವೆ ಕರೋನಾ ಲಸಿಕೆ ಸಿಕ್ಕಿದೆ. ಆದ್ರೆ ಕರೋನಾ ಲಸಿಕೆ ಪಡೆದರೂ ಕೆಲವರಿಗೆ ಕೋವಿಡ್ ಪಾಸಿಟಿವ್ ಆಗುತ್ತಿರುವ ಪ್ರಕರಣಗಳು ಬೆಳಕಿಗಿ ಬಂದಿದೆ‌ ಈಗ ಕೋವಿಡ್ ಎರಡನೇ ಡೋಸ್ ಲಸಿಕರ ಪಡೆದ  1 ತಿಂಗಳ ನಂತರ ಕೊರೊನಾ ಪಾಸಿಟಿವ್ ಬಂದಿದೆ. ಚಾಮರಾಜನಗರ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿಗೆ ಕೊರೋನಾ ಪಾಸಿಟಿವ್ ಆಗಿದ್ದಾರೆ. ಮಾ.8 ರಂದು ಕೋವಿಡ್ ಲಸಿಕೆಯ 2ನೇ ಡೋಸ್  ಪಡೆದಿದ್ದರು ಹೀಗಿದ್ದರೂ ಜಿಲ್ಲಾಧಿಕಾರಿ ಅವರಿಗೆ ಕೋವಿಡ್ ಪಾಸಿಟಿವ್ ಬಂದಿದ್ದು, ಹಲವಾರು ಅನುಮಾನಕ್ಕೆ ಕಾರಣವಾಗಿದೆ. ಇನ್ನು ತಜ್ಞರು ಹೇಳುವ ಪ್ರಕಾರ ಲಸಿಕೆ ಪಡೆದ 45 ದಿನಗಳ ಬಳಿಕ ರೋಗ ನಿರೋಧಕ ಶಕ್ತಿ ಹೆಚ್ಚಲಿದೆ ಎಂದಿದ್ದರು. ಆದ್ರೆ ಜಿಲ್ಲಾಧಿಕಾರಿ ಲಸಿಕೆ ಪಡೆದು ಒಂದು ತಿಂಗಳು ಸಹ ಕಳೆದಿಲ್ಲಾ ಎನ್ನುವುದು ಒಂದು ಸಮಾಧಾನ ವಿಷಯ…

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply