ಕೊಪ್ಪಳ-ರಾಜ್ಯದಲ್ಲಿ ಕರೋನಾ ಎರಡನೆ ಅಲೆಯ ಅಬ್ಬರ ಜೋರಾಗಿದೆ. ಆದ್ರೆ ಈ ವರ್ಷದಲ್ಲಿ ಕಳೆದ ವರ್ಷದ ಹಾಗೆ ಜನರು ಕರೋನಾ ಸೋಂಕಿಗೆ ಡೋಂಟ್ ಕೇರ್ ಎನ್ನುತ್ತಿದ್ದಾರೆ. ರಾಜ್ಯದ ನಾನಾ ಭಾಗದಲ್ಲಿ ಕಳೆದ ವರ್ಷ ರದ್ದು ಮಾಡಿದ್ದ ಜಾತ್ರೆಗಳು ಈ ವರ್ಷ ಜಿಲ್ಲಾಡಳಿತ ರದ್ದು ಮಾಡಿದರೂ ಭರ್ಜರಿಯಾಗಿ ನಡೆಯುತ್ತಿವೆ. ಕೊಪ್ಪಳ ಜಿಲ್ಲೆಯ ಕನಕಗಿರಿ ಕನಕಾಚಲಪತಿ ರಥೋತ್ಸವ ಅದ್ದೂರಿಯಾಗಿ ನಡೆದಿದ. ಪ್ರತಿ ವರ್ಷ ಈ ಜಾತ್ರೆ ಸಂಜೆ ಸಮಯದಲ್ಲಿ ನಡೆದರೆ.ಈ ವರ್ಷ ಮೊದಲ ಬಾರಿಗೆ ರಥೋತ್ಸವ ಬೆಳಿಗ್ಗೆ ನಡೆದಿದೆ. ಕರೋನಾ ಇರುವ ಹಿನ್ನೆಲೆಯಲ್ಲಿ ಜಾತ್ರಗೆ ಸಾರ್ವಜನಿಕರಿಗೆ ನಿರ್ಬಂಧ ಹೇರಿದ್ದರೂ, ರಥೋತ್ಸವದ ವೇಳೆ ಕೋವಿಡ್ ನಿಯಮ ಉಲ್ಲಂಘನೆಯಾಗಿದೆ. ದೇವರ ಭಕ್ತಯ ಹೆಸರಲ್ಲಿ ಜನರು ಮಾಸ್ಕ್,ಸಾಮಾಜಿಕ ಅಂತರ ಮರೆತು ಜಾತ್ರೆಯಲ್ಲಿ ಜನ ಭಾಗಿಯಾಗಿದ್ದರು. ಜನರು ಭಕ್ತಿಯ ಹೆಸರಲ್ಲಿ ಟಫ್ ರೂಲ್ಸ್ ಫಾಲೋ ಮಾಡದಿದ್ರೂ ಜಿಲ್ಲಾಡಳಿತ ಲೈ ಚೆಲ್ಲಿತ್ತು….