ಚಿಕ್ಕಬಳ್ಳಾಪುರ- ಮಾಜಿ ಸಚಿವ ರಮೇಶ್ ಜಾರಿಕಿಹೊಳಿ ಅವರ ಸಿಡಿ ಪ್ರಕರಣವನ್ನು ಈ ಸರ್ಕಾರ ಮುಚ್ಚಿ ಹಾಕಲಿದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಆರೋಪ ಮಾಡಿದ್ದಾರೆ. ಈ ಕುರಿತು ಇಂದು ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು ಈ ಹಿಂದೆ ಡ್ರಗ್ಸ್ ಕೇಸ್ ರಾಜ್ಯದಲ್ಲಿ ಭಾರಿ ಸದ್ದು ಮಾಡಿತ್ತು. ಈಗಾ ಆ ಕೇಸ್ ಮುಚ್ಚಿಹಾಕಿದ್ದಾರೆ. ಅದೇ ರೀತಿಯಲ್ಲಿ ರಮೇಶ್ ಜಾರಕಿ ಹೊಳಿ ಅವರ ಸಿಡಿ ಪ್ರಕರಣವನ್ನು ಸಹ ಮುಚ್ವಿ ಹಾಕುತ್ತಾರೆ ಎಂದು ಗಂಭೀರ ಆರೋಫ ಮಾಡಿದ್ದಾರೆ.  ಇದೇ ವೇಳೆಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಕರೋನಾ ಸೋಂಕು ಹೆಚ್ಚಳವಾಗುತ್ತಿದೆ. ಈ ಸಮಯದಲ್ಲಿ ರಾಜ್ಯ ಸರ್ಕಾರ ಹುಚ್ಚರಹಾಗೆ ವರ್ತನೆ ಮಾಡುತ್ತಿದ್ದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಈ ಸರ್ಕಾರಕ್ಕೆ ಇಲ್ಲಾ. ದಿನಕ್ಕೊಂದು ರೂಲ್ಸ್ ಮಾಡಿ ಜನರಿಗೆ ಗೊಂದಲ ಮಾಡುತ್ತಿದ್ದೆ. ಹೀಗಾಗಿ ಇದೊಂದು ಹುಚ್ಚಾರ ಆಸ್ಪತ್ರೆಯ ತೆರನಾಗಿ ಕೆಲಸ ಮಾಡುತ್ತಿದೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.  ಕರೋನಾ ಸಲುವಾಗಿ ಕಳೆದ ವರ್ಷ ಒಂದೇ ದಿನದಲ್ಲಿ 1 ಸಾವಿರ ಹಾಸಗಿಯ ಆಸ್ಪತ್ರೆಯನ್ನು ನಿರ್ಮಾಣ ಮಾಡಿದ್ರು ಆದ್ರೆ ಅಲ್ಲಿ ಇರುವ ಹಾಸಗಿ ಬೆಡ್ ಎಲ್ಲಿ ಹೋದವು, ಅದಕ್ಕೆ ಯಾರು ಲೆಕ್ಕಾ ಕೊಡುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply