ಮೈಸೂರು- ರಾಜ್ಯದಲ್ಲಿ ಕರೋನಾ ಎರಡನೆ ಅಲೆ ನಾಗಾಲೋಟದಲ್ಲಿ ಓಡುತ್ತಿದ್ದೆ. ‌ಈ ಹಿನ್ನೆಲೆಯಲ್ಲಿ ಕೊರೊನ ಎರಡನೇ ಅಲೆಯನ್ನು ತಡೆಗಟ್ಟುವ ಸಲುವಾಗಿ ಮಾಸ್ಕ್ ಹಾಗೂ ದಂಡ ಹಾಕಲು ಖಾಕಿ ಪಡೆ ಫೀಲ್ಡ್ ಗಿಳಿದಿದೆ. ಮೈಸೂರಿನ ನಗರದ ಎನ್.ಆರ್ ಮೋಹಲ್ಲಾದಲ್ಲಿ  ಪೊಲೀಸರಿ ಜಾಥಾ ನಡೆಸಿದ್ದಾರೆ.

ಬೀದಿ ಬೀದಿಗಳಿಗೆ ತೆರಳಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದೆ ಖಾಕಿ ಪಡೆ, ವಾಹನ ಸವಾರರು, ಬೀದಿ ವ್ಯಾಪರಿಗಳ ಬಳಿ ತೆರಳಿ ಜಾಗೃತಿ ಮೂಡಿಸಿದ, ಸಾಮಾಜಿಕ ಅಂತರ ಕಡ್ಡಾಯ ಮಾಸ್ಕ್ ಧರಿಸಿ ಆರೋಗ್ಯ ಕಾಪಾಡಿಕೊಳ್ಳಿ ಎಂದು ಪೊಲೀಸರ ಮನವಿ ಮಾಡಿದ್ದಾರೆ. ಅಲ್ಲದೇ  ಮಾಸ್ಕ್ ಧರಿಸದವರಿಗೆ ಸ್ಥಳದಲ್ಲೇ ಮಾಸ್ಕ್ ದಂಡ ವಿಧಿಸಿದ್ದಾರೆ. ಆಟೋ, ಬಸ್, ಕಾರಿನಲ್ಲಿ ಮಾಸ್ಕ್ ಹಾಕದವರಿಗೆ ಕೂಡಾ ದಂಡ ಹಾಕಿ  ಬಿಸಿ ಮುಟ್ಟಿಸಿದ್ದಾರೆ. ಇನ್ನು ಮಾಸ್ಕ್ ಧರಿಸಿ ಸಂಚಾರ ನಡೆಸುವಂತೆ ಪೊಲೀಸರು ಜನರಲ್ಲಿ  ಮನವಿ ಮಾಡಿದ್ದಾರೆ. ಪೊಲೀಸರ ಈ ಕಾರ್ಯ ವೈಕರಿಗೆ ಜನರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ….

 

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply