ಬೆಂಗಳೂರು- ಒಂದು ಕಲ್ಲು ಗಣಿಗಾರಿಕೆ ದುರಂತ ಮಾಸುವ ಮುನ್ನವೇ ಮತ್ತೊಂದು ದುರಂತ ನಡೆದಿದ್ದು, ಆಡಳಿತ ರೂಡ ಸರ್ಕಾರಕ್ಕೆ ಭಾರಿ ಮುಜುಗರ ತಂದಿದೆ. ಇಙದು ಕಾಂಗ್ರೆಸ್ ಬಹುತೇಕ ನಾಯಕರು ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿ ಈ ದುರಂತಕ್ಕೆ ಸರ್ಕಾರವೇ ನೇರ ಹೊಣೆ ಎಂದಿದ್ದಾರೆ. ಇನ್ನು ಈ ಕಿರಿತು ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ, ಚಿಕ್ಕಬಳ್ಳಾಪುರ ಸ್ಫೋಟಕ್ಕೆ ಸಂಬಂಧಿಸಿ, ಈ ಮೊದಲೇ ಉಪ ಆಯುಕ್ತರು ಕಲ್ಲು ಗಣಿಗಾರಿಕೆ ನಡೆಸದಂತೆ ನೋಟೀಸ್ ಕೊಟ್ಟಿದ್ದರು. ಆದರೂ ಗಣಿಗಾರಿಕೆ ನಿಲ್ಲಿಸಿಲ್ಲ. ಸಮಸ್ಯೆ ಇದ್ದಾಗ ಮಾತ್ರ ನೋಟೀಸ್ ನೀಡಲಾಗುತ್ತದೆ. ಪದೇಪದೇ ನಡೆಯುತ್ತಿರುವ ಇಂತಹ ಘಟನೆಗಳಿಗೆ ಯಾರು ಹೊಣೆ? ಈ ಬಗ್ಗೆ ಮುಖ್ಯಮಂತ್ರಿಗಳೇ ಉತ್ತರ ನೀಡಬೇಕು ಎಂದಿದ್ದಾರೆ… ‌

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply