ಬೆಳಗಾವಿ- ಬಸನಗೌಡ ಪಾಟೀಲ್ ಯತ್ನಾಳ – ಸಚಿವ ನಿರಾಣಿ ಮಧ್ಯೆ ಪರಸ್ಪರ ವಾಗ್ದಾಳಿ ವಿಚಾರಕ್ಕೆ ಸಂಭಂದಿಸಿದಂತೆ ಇಂದು ಮಾಜಿ ಮುಖ್ಯಮಂತ್ರಿ ಜಗದೇಶ್ ಶೆಟ್ಟರ ಪ್ರತಿಕ್ರೀಯೆ ನೀಡಿದ್ದು,  ಯಡಿಯೂರಪ್ಪ ನೇತೃತ್ವದಲ್ಲಿ ಎಲ್ಲಾ ಶಾಸಕರು, ಸಚಿವರು ಕೆಲಸ ಮಾಡ್ತಿದಾರೆ. ಸುಮ್ಮನೇ ಬೇರೆ ಬೇರೆ ವಿಚಾರ ಚರ್ಚೆ ಮಾಡೋ ಅವಶ್ಯಕತೆ ಇಲ್ಲ ಎಂದು ಹೆಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಅರುಣ್ ಸಿಂಗ್ ಸ್ಪಷ್ಟನೆ ಕೊಟ್ಟಿದ್ದಾರೆ, ಯಡಿಯೂರಪ್ಪ ನೇತೃತ್ವದಲ್ಲಿ ಎಲ್ಲಾ ಶಾಸಕರು, ಸಚಿವರು ಕೆಲಸ ಮಾಡ್ತಿದಾರೆ. ಸುಮ್ಮನೇ ಬೇರೆ ಬೇರೆ ವಿಚಾರ ಚರ್ಚೆ ಮಾಡೋ ಅವಶ್ಯಕತೆ ಇಲ್ಲ, ಯಾವುದೂ ಅಸಮಾಧಾನ ಇಲ್ಲ ಎಲ್ಲರೂ ಒಗ್ಗಟ್ಟಾಗಿ ಯಡಿಯೂರಪ್ಪ ಜತೆಗಿದ್ದೀವಿ, ಅದು ಅವರವರ ವೈಯಕ್ತಿಕವಾದಂತದ್ದು ಎಂದ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಇದೇ ವೇಳೆಯಲ್ಲಿ ಮಾತನಾಡಿದ ಅವರು ಮಸ್ಕಿ, ಬಸವಕಲ್ಯಾಣ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತೆ ಹಾಗೇ ಯಡಿಯೂರಪ್ಪ ನಾಯತ್ವಕ್ಕೆ ಹೆಚ್ಚಿನ ಶಕ್ತಿ ಕೊಡ್ತಾರೆ. ಯಾವ ಬದಲಾವಣೆಯೂ ಆಗಲ್ಲ, ಬಿಎಸ್‌ವೈ ನೇತೃತ್ವದಲ್ಲಿ ಸರ್ಕಾರ ಮುಂದುವರೆಯುತ್ತೆ, ಸಿಎಂ ರಾಜೀನಾಮೆ ನೀಡಬೇಕು ಇಲ್ಲ ಸಚಿವ ಸ್ಥಾನದಿಂದ ಈಶ್ವರಪ್ಪ ವಜಾ ಆಗಬೇಕು ಎಂಬ ಡಿಕೆಶಿ ಆಗ್ರಹ ಮಾಡಿದ್ದಾರೆ ಆದ್ರೆಡಿ.ಕೆ.ಶಿವಕುಮಾರ್‌ಗೆ ಕೇಳಲು ಏನು ಹಕ್ಕಿದೆ, ನೈತಿಕತೆ ಇದೆ ಎಂದುಪ್ರಶ್ನೆ ಮಾಡಿದ್ದಾರೆ..

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply