ಶಿವಮೊಗ್ಗ- ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಲ್ಲಿ ಇರುವ ಹೆಣ್ಣು ಆನೆ ನೀಲಾಂಬರಿ ಚಿಕಿತ್ಸೆ ನೀಡಲು ಬಂದ ವೈದ್ಯರ ಮೇಲೆ ದಾಳಿ ಮಾಡಿದೆ. ಸಕ್ರಬೈಲಿನಲ್ಲಿ ಇರುವ ಆನೆ ಬಿಡಾರದಲ್ಲಿ ಹೆಣ್ಣು ಆನೆಯೊಂದು ಕಳೆದ ಎರಡು ದಿನದ ಹಿಂದೆ ಮರಿಗೆ ಜನ್ಮ ನೀಡಿತ್ತು ಈ ಹಿನ್ನೆಲಯಲ್ಲಿ .ತಾಯಿ ಹಾಗೂ ಮರಿಯಾನೆ ಔಷಧೋಪಚಾರಕ್ಕೆ ವೈದ್ಯ ಡಾ.ವಿನಯ್ ಅವರು ತೆರಳಿದ್ದರು, ಪಕ್ಕದಲ್ಲಿ ಇದ್ದ ನೀಲಾಂಬರಿ ವೈದ್ಯ ವಿನಯ್ ಅವರಿಗೆ ಸೊಂಡಿಲಿನಿಂದ ತಿವಿದಿದೆ. ಸೊಂಡಿಲಿಂದ ತಿವಿದ ಹಿನ್ನಲೆಯಲ್ಲಿ ವಿನಯ್ ಅವರು ಕೆಳಗೆ ಬಿದಿದ್ದಾರೆ. ಆಗ ನೀಲಾಂಬರಿ ತನ್ನ ಕಾಆಲು ಮೇಲೆ ಎತ್ತಿ ವಿನಯ್ ಅವರ ಮೇಲೆ ಇಡಲು ಮುಂದಾಗಿದೆ. ಅಪಾಯ ಅರಿತ ವೈದ್ಯ ವಿನಯ್ ಅವರು ತಕ್ಷಣವೇ ಮೇಲೆ ಎದಿದ್ದಾರೆ. ವೈದ್ಯರ ಸಮಯ ಪಜ್ಜೆಯಿಂದಾಗಿ ದೊಡ್ಡ ಅಪಾಯ ತಪ್ಪಿದೆ. ಇನ್ನು ನೀಲಾಂಭರಿಯನ್ನು ಇತ್ತೀಚಿಗೆ ಹೆಚ್ಚಿನ ಹಾರೈಕೆಗಾಗಿ ಚಿತ್ರದುರ್ಗದ ಮುರುಘಾ ಮಠದಿಂದ ಸಕ್ರೆಬೈಲು ಆನೆ ಬಿಡಾರಕ್ಕೆ ಕರೆ ತಂದಿದ್ದರು, ವೈದ್ಯ ವಿನಯ್ ಗೆ ಸಣ್ಣಪುಟ್ಟ ಗಾಯವಾಗಿದ್ದು , ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ