ಹುಬ್ಬಳ್ಳಿ- ರಾಜ್ಯದಲ್ಲಿ ಕರೋನಾ ಸೋಂಕು ಹೆಚ್ಚಳವಾದ ಹಿನ್ನೆಲೆಯಲ್ಲಿ , ರಾಜ್ಯ ಸರ್ಕಾರ ಕರೋನಾ ಕಟ್ಟಿಹಾಕುವ ಹಿನ್ನೆಲೆಯಲ್ಲಿ ಕೆಲ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಂಟು ಜಿಲ್ಲೆಯಲ್ಲಿ ಅತೀ ಹೆಚ್ಚು ಸೋಂಕು ಕಂಡ ಬಂದ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಗಳಲ್ಲಿ ಟಫ್ ರೂಲ್ಸ್ ಜಾರಿ ಮಾಡಿದೆ. ಕಾರಣ ಚಿತ್ರಮಂದಿರ ಹಾಗೂ ಜಿಮ್ ಗಳಿಗೆ ನಿರ್ಬಂಧ ಹೇರಿದೆ. ಹೀಗಾಗಿ ಕಳೆದ ಒಂದು ವಾರದಬಹಿಂದೆ ತರೆಕಂಡ ಚಿತ್ರ ಯುವರತ್ನ ಮೇಲೆ ಬಾರಿ ಹೊಡೆತ ಬಿದ್ದಿದೆ. ಹೀಗಾಗಿ ಸಲಗ ಚಿತ್ರ ತಙಡ ಈಗಾಗಲೇ ರಾಜ್ಯದ ನಾನಾ ಭಾಗದಲ್ಲಿ ಚಿತ್ರದ ಪ್ರಚಾರದಲ್ಲಿ ತೊಡಗಿದೆ. ಆದ್ರೆ ಇಂದು ಈ ಕುರಿತ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಸದ್ಯಕ್ಕೆ ನಾವು ಸಲಗ ಚಿತ್ರ ಬಿಡುಗಡೆ ಮಾಡುವುದಿಲ್ಲಾ. ತುಙಬಾ ಕಷ್ಟಪಟ್ಟು ಚಿತ್ರ ಮಾಡಲಾಗಿದೆ. ಹೀಗಾಗಿ ಈ ಸಮಯದಲ್ಲಿ ಚಿತ್ರ ಬಿಡುಗಡೆ ಮಾಡಲು ನಾವು ತಯಾರರಲ್ಲಿ ಎಂದಿದ್ದಾರೆ. ಕೋವಿಡ್ ೨ನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಚಿತ್ರಮಂದಿರಗಳಲ್ಲಿ‌ ಶೇಕಡಾ ೫೦%ರಷ್ಟು‌ ಆಸನದ ವ್ಯವಸ್ಥೆ ಮಾಡಲು ಹೊರಟಿದೆ. ಸರ್ಕಾರದ ಈ ನಿರ್ಧಾರಕ್ಕೆ ಸಲಗ ಚಿತ್ರತಂಡ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ ನಾವು ಈ ಸಮಯದಲ್ಲಿ ಚಿತ್ರ ಬಿಡುಗಡೆ ಮಾಡುವುದಿಲ್ಲಾ ಎಂದು ಚಿತ್ರ ತಂಡ ತಿಳಿಸಿದೆ…

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply