ಬಳ್ಳಾರಿ: ಮೌಢ್ಯಾಚರಣೆ- ಕಂದಾಚಾರದಂತಹ ಅನಿಷ್ಠ ಪದ್ಧತಿಗೆ ಒಳಗಾಗಿ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿನ ಗರ್ಭೀಣಿಯರ ಮನೆಗಳಲ್ಲಿ ಶೌಚಗೃಹ – ಬಚ್ಚಲು ಗುಂಡಿ ನಿರ್ಮಾಣಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.
ಅದನ್ನ ಸೂಕ್ಷ್ಮವಾಗಿ ಗಮನಿಸಿದ ಬಳ್ಳಾರಿ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಅವರು ಜಾಗೃತಿ ಮೂಡಿಸುವ ಅಭಿಯಾನಕ್ಕೆ ಸದ್ದಿಲ್ಲದೇ ಚಾಲನೆ ನೀಡಿದ್ದಾರೆ.

ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಯಾ ಗ್ರಾಮಗಳಲ್ಲಿನ ಶೌಚಗೃಹ- ಬಚ್ಚಲು ಗುಂಡಿ ನಿರ್ಮಾಣ ಕಾರ್ಯಕ್ಕೆ ವಿರೋಧ ವ್ಯಕ್ತಪಡಿಸುವ ಗರ್ಭೀಣಿಯರ ಮನೆಗಳಿಗೆ ಜಿಲ್ಲಾ ಪಂಚಾಯಿತಿ ಕಾರ್ಯವ್ಯಾಪ್ತಿಗೆ ಬರುವ ತಾ.ಪಂ.ಇಒ, ಪಿಡಿಓ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನ ಬಳಸಿಕೊಂಡು ಆ ಮನೆಗಳಲ್ಲಿ ವಾಸಿಸುವ ಮನೆ ಮಂದಿಗೆಲ್ಲಾ ಬಹುಮುಖ್ಯವಾಗಿ ಗರ್ಭೀಣಿಯರಿಗೂ ಹಾಗೂ ಆಕೆಯ ತಾಯಿಗೂ ಅರಿವು ಮೂಡಿಸುವ ಮೂಲಕ ಶೌಚಗೃಹ – ಬಚ್ಚಲು ಗುಂಡಿ ನಿರ್ಮಾಣಕ್ಕೆ ಮುಂದಾಗಿರೋದು ಶ್ಲಾಘನಾರ್ಹ.

ಬಳ್ಳಾರಿ ತಾಲೂಕು ಪಂಚಾಯಿತಿ ಇಒ ಬಸವರಾಜ ನೇತೃತ್ವದಲ್ಲಿ ತಾಲೂಕಿನ ಸಂಗನಕಲ್ಲು ಗ್ರಾಮ ಸೇರಿ ಇನ್ನಿತರೆ ಗ್ರಾಮಗಳಲ್ಲಿ ನೆಲೆಸಿರುವ ಗರ್ಭೀಣಿಯರ ಮನೆಗಳಿಗೆ ತೆರಳಿ ಶೌಚಗೃಹ- ಬಚ್ಚಲು ಗುಂಡಿ ನಿರ್ಮಾಣ ಕಾರ್ಯದಿಂದ ಅಪಶಕುನ ಆಗುತ್ತೆ ಅಂತ ಯಾರು ಹೇಳಿದ್ದು ನಿಮಗೆ.‌ ಅದೆಲ್ಲ ಮೌಢ್ಯಾಚರಣೆ – ಕಂದಾಚಾರದಂತಹ ಅನಿಷ್ಠ ಪದ್ಧತಿ. ನಿಮ್ಮೂರಿನ ಹಿರಿಕರ ಮಾತುಗಳನ್ನ ಕೇಳಿ, ನೀವು ನಿಮ್ಮ ಹಾಗೂ ಮಗುವಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತೆ.

ಈ ಶೌಚಗೃಹ- ಬಚ್ಚಲು ಗುಂಡಿ ನಿರ್ಮಾಣ ಕಾರ್ಯದಿಂದ ನಿಮಗೆ ಒಳಿತಾಗಲಿದೆ. ಅಲ್ಲದೇ, ರಾತ್ರಿ ವೇಳೆ ಹೊರಗಡೆ ಬಹಿರ್ದೆಸೆಗೆ ಹೋಗೋದು ಕೂಡ ನಿಲ್ಲುತ್ತೆ. ಹೆರಿಗೆಯಾದ ಬಳಿಕವೂ ಈ ಶೌಚಗೃಹ- ಬಚ್ಚಲು ಗುಂಡಿಯ ಅನುಕೂಲ ಅತ್ಯಗತ್ಯವಾಗಿರುತ್ತೆ ಎಂದು ಇಒ ಬಸವರಾಜ ತಿಳುವಳಿಕೆ ನೀಡಿದ್ದಾರೆ.
ಅವರ ತಿಳಿವಳಿಕೆಯಿಂದಲೇ ಗರ್ಭೀಣಿ ಮಹಿಳೆಯರು ಶೌಚಗೃಹ- ಬಚ್ಚಲು ಗುಂಡಿ ನಿರ್ಮಾಣಕಾರ್ಯಕ್ಕೆ ಮುಂದಾಗಿರೋದು ಕೂಡ ಶ್ಲಾಘನಾರ್ಹ.

ಗರ್ಭೀಣಿಯರ ಸಾವಿಗೂ ಕೂಡ ಇದೇ ಕಾರಣ ಇರಬಹುದು: ಬಹು ಸಂಖ್ಯಾತ ಮಹಿಳೆಯರು ಈ ಮೌಢ್ಯಾಚರಣೆಯಿಂದಾಗಿ ಮನೆಯಲ್ಲಿ ಶೌಚಗೃಹ – ಬಚ್ಚಲು ಗುಂಡಿಯನ್ನ ಹೊಂದಿರದೇ ಹೊರಗಡೆ ಬಹಿರ್ದೆಸೆಗೆ ಹೋದಾಗ, ಆರೋಗ್ಯದಲ್ಲಿ ಏರು ಪೇರಾಗಿ ಸಾವು- ನೋವು ಸಂಭವಿಸೋದು ಈ ಕಾರಣಕ್ಕಾಗಿಯೇ ಎಂಬುದು ಮಾತ್ರ ಇದೀಗ ದಿಟ ವಾಗಿದೆ.

ಈ ಸಂಬಂಧ ಬಳ್ಳಾರಿ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಅವರು ಮಾತನಾಡಿ, ಬಹುತೇಕ ಗರ್ಭೀಣಿ ಮಹಿಳೆಯರು ಶೌಚಗೃಹ, ಶೌಚಾಲಯ ಹಾಗೂ ಬಚ್ಚಲು ಗುಂಡಿಗಳನ್ನ ತಮ್ಮಂತಮ್ಮ ಮನೆ ಗಳಲ್ಲಿ ನಿರ್ಮಿಸೋದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ‌. ಅದ್ಕೆ ಪ್ರಮುಖ ಕಾರಣವೆಂದರೆ ಈ ಮೌಢ್ಯಾಚರಣೆ, ಕಂದಾಚಾರದಂತಹ ಅನಿಷ್ಠ ಪದ್ಧತಿಯು ಈ ಗ್ರಾಮೀಣ ಭಾಗದ ಗರ್ಭೀಣಿ ಮಹಿಳೆಯರಲ್ಲಿ ಹೆಚ್ಚಿದೆ. ಹೀಗಾಗಿ, ಜಿಲ್ಲಾ ಪಂಚಾಯಿತಿ ವತಿಯಿಂದ ಅಂಥಹ ಗರ್ಭೀಣಿ ಯರ ಮನೆಗಳಿಗೆ ತೆರಳಿ, ತಿಳುವಳಿಕೆ ಮೂಡಿಸುವ ಮುಖೇನ ಶೌಚಗೃಹ- ಬಚ್ಚಲು ಗುಂಡಿ ಹಾಗೂ ಶೌಚಾಲಯ ನಿರ್ಮಾಣ ಮಾಡೋ ಕಾರ್ಯಕ್ಕೆ ಮುಂದಾಗಿದೆ ಎಂದ್ರು ಸಿಇಒ ನಂದಿನಿ.

Leave A Reply