ಬಳ್ಳಾರಿ- ಜಿಲ್ಲೆಯ ‌ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ಗ್ರಾಪಂಯ ರಾಜಾಪುರದ ಮತ ಕ್ಷೇತ್ರದಿಂದ ಮಂಗಳ ಮುಖಿ ಗೆಲುವು ಸಾಧಿಸಿದ್ದಾರೆ. ಈ ಗ್ರಾಮ ಪಂಚಾಯತಿಯಲ್ಲಿ ಕಳೆದ ೨೬ ವರ್ಷಗಳಿಂದ ಚುನಾವಣೆ ನಡೆದೇ ಇರಲಿಲ್ಲ. ಕಾರಣ ಈ ಗ್ರಾಮ ಪಂಚಾಯತಿಯಲ್ಲಿ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗುತಿತ್ತು. ಆದ್ರೆ ಸ್ಥಳೀಯರ ಒತ್ತಾಯದ ಮೇರೆಗೆ ಈ ವರ್ಷ ಚುನಾವಣೆ ನಡೆದಿದ್ದು , ಮಂಗಳ ಮುಖಿ ಗ್ರಾಪಂ ಸ್ಥಾಪನೆಯಾಗಿ 26 ವರ್ಷಗಳ ನಂತರ ನಡೆದ ಗ್ರಾಪಂ ಚುನಾವಣೆಯಲ್ಲಿ ಗೆಲುವು ಸಾದಿಸಿದ್ದಾರೆ. ಅಲ್ಲದೇ ತಮ್ಮ ಪ್ರತಿಸ್ಪರ್ಧಿಯನ್ನು ಭಾರಿ ಅಂತರದಿಂದ ಸೋಲಿಸುವ ಮೂಲಕ ಸುಧಾ ಗೆಲುವಿನ ನಗೆ ಬೀರಿದ್ದಾರೆ.‌ ಗೆದ್ದ ಮಂಗಳಮುಖಿಯನ್ನು ಮತದಾರರು ಹಾರ ಹಾಕಿ ಅಭಿನಂದನೆ ಸಲ್ಲಿಸಿದ್ದಾರೆ…

Leave A Reply