ಬಳ್ಳಾರಿನಂದಿನಿಯ ಸುಮಾರು 70 ಉತ್ಪನ್ನಗಳಲ್ಲಿ 30 ಸಿಹಿ ನಂದಿನಿ ಉತ್ಪನ್ನಗಳಿದ್ದು, ಈ ಅವಧಿಯ ಸಿಹಿ ಉತ್ಸವದಲ್ಲಿ ನಂದಿನಿ ಸಿಹಿ ಉತ್ಪನ್ನಗಳ ಜೊತೆಗೆ ನಂದಿನಿ ಚೀಸ್ ಉತ್ಪನ್ನಗಳಿಗೂ ಸಹ ಶೇ.10 ರಿಯಾಯಿತಿಯಲ್ಲಿ ದೊರೆಯಲಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಟಿ.ತಿರುಪತಪ್ಪ ಹೇಳಿದರು. ನಗರದ ಪಾಂಡುರಂಗ ದೇವಸ್ಥಾನದ ಎದರುಗಡೆ ಇರುವ ನಂದಿನಿ ಎ.ಟಿ.ಎಂ ಪಾರ್ಲರ್ ಆವರಣದಲ್ಲಿ ಸೋಮವಾರ ನಡೆದ ನಂದಿನಿ ಸಿಹಿ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯಾದ್ಯಾಂತ 14 ಒಕ್ಕೂಟಗಳಿದ್ದು, ಕರ್ನಾಟಕ ಹಾಲು ಮಂಡಳಿ ವತಿಯಿಂದ ಎಲ್ಲಾ ಒಕ್ಕೂಟಗಳಲ್ಲೂ ಕಳೆದ 14 ವರ್ಷಗಳಿಂದ ನಂದಿನಿ ಸಿಹಿ ಉತ್ಸವ ಕಾರ್ಯಕ್ರಮವನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಈ ಉತ್ಸವವು ಜ.07 ವರೆಗೆ  ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.

About Author

Priya Bot

Leave A Reply