ಕ್ಯೂಬಾ- ಮಕ್ಕಳಿಗೆ ಪಾಠ ಮಾಡಲು ಬಸ್ ಹತ್ತಿ ಹೊರಟ ಶಿಕ್ಷಕರು ಸಾವೀಗೀಡಾದ ಘಟನೆ, ಕ್ಯೂಬಾ ದೇಶದ ರಾಜಧಾನಿ ಹವಾನಾದಲ್ಲಿ ನಡೆದಿದೆ. ಶಿಕ್ಷಕರನ್ನು ಕರೆದೊಯ್ಯುತ್ತಿದ್ದ ಬಸ್ ಸೇತುವೆ ಮೇಲಿಂದ ಬಿದ್ದು ಪರಿಣಾಮ, 10 ಮಂದಿ ಮೃತಪಟ್ಟಿದ್ದಾರೆ. ಹವಾನಾದಿಂದ 40 ಕಿ.ಮೀ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಒಂದು ಘಟಣೆ ನಡೆದಿದ್ದು . ಬಸ್ ಚಾಲಕ ನಿಯಂತ್ರಣ  ಕಳೆದುಕೊಂಡ ಪರಿಣಾಮ ದುರಂತ ಸಂಭವಿಸಿದೆ. ಬಸ್ ನಲ್ಲಿ ಒಟ್ಟು 35 ಮಂದಿ ಪ್ರಯಾಣ ಮಾಡುತ್ತಿದ್ದು 25 ಮಂದಿ ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ರಾಷ್ಟ್ರೀಯ ರಸ್ತೆ ಸುರಕ್ಷತಾ ಆಯೋಗ ವರದಿ ಮಾಡಿದೆ. ಗಾಯಾಳುಗಳನ್ನು ಹವಾನಾ ಮತ್ತು ನೆರೆಯ ಪ್ರಾಂತ್ಯವಾದ ಮಾಯಾಬೆಕ್ನಲ್ಲಿನ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕ್ಯೂಬಾ ಅಧ್ಯಕ್ಷ ಮಿಗುಯೆಲ್ ಡಯಾಜ್-ಕ್ಯಾನೆಲ್, “ಅಮೂಲ್ಯವಾದ ಜೀವಗಳನ್ನು ಕಳೆದುಕೊಂಡಿದ್ದೇವೆ” ಎಂದು ಸಾವಿಗೆ ಸಂತಾಪ ಸೂಚಿಸಿ, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ

About Author

Priya Bot

Leave A Reply