13 ವರ್ಷದ ಬಾಲಕನ ಪ್ರಾಣ ತೆಗೆದ ಸೀರೆ.

0

ಶಿವಮೊಗ್ಗ.

ಸ್ನೇಹಿತರೊಂದಿಗೆ ಎಂದಿನಂತೆ ಆಟವಾಡುತಿದ್ದಾ ಬಾಲಕ ಏಕಾಏಕಿ ಜೋಕಾಲಿಗೆ ಕಟ್ಟಿದ್ದ ಸೀರೆ ಉರುಳಾಗಿ ಬಾಲಕನ ಪ್ರಾಣಕ್ಕೆ ತೆಗೆದಿರುವ ಘಟನೆ ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕನನ್ನು ಕಿಶೋರ್ (13) ಎಂದು ಗುರುತಿಸಲಾಗಿದೆ.

ಮೃತ ಕಿಶೋರ್ ಮೂಲತಃ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ದೊಡ್ಡೇರಿ ಗ್ರಾಮದ ನಿವಾಸಿ. ತಮ್ಮ ಸಂಬಂಧಿಕರ ಮನೆಯಲ್ಲಿ ಇದ್ದು ವ್ಯಾಸಂಗ ಮಾಡುತ್ತಿದ್ದ. ‌ಗ್ರಾಮದ ವೆಂಕಟೇಶ್ವರ ವಿದ್ಯಾಲಯದಲ್ಲಿ 8 ನೇ ತರಗತಿ ಓದುತಿದ್ದ, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ  ಮಧ್ಯಾಹ್ನ ಮನೆಯಲ್ಲಿ ಸೀರೆಯಿಂದ ಕಟ್ಟಿದ್ದ ಜೋಕಾಲಿಯಲ್ಲ ಆಟವಾಡುತಿದ್ದ, ಆಟವಾಡುವ ಬರದಲ್ಲಿ ಜೋಕಾಲಿಯ ಸೀರೆ ಬಾಲಕ ಕಿಶೋರ್ ಕುತ್ತಿಗೆ, ಉರುಳಾಗಿದೆ.

ಹೀಗಾಗಿ ಕ್ಷಣಾರ್ಧದಲ್ಲಿ ಕಿಶೋರ್ ಪ್ರಾಣ ಹಾರಿ ಹೋಗಿದೆ‌.‌ಸೀರೆ ಬಿಗಿಯಾಗಿ ಸುತ್ತಿಕೊಂಡಿದ್ದರಿಂದ ಬಾಲಕ ಕಿಶೋರ್ ಕ್ಷಣಾರ್ಧದಲ್ಲಿಯೇ ಉಸಿರು ನಿಲ್ಲಿಸಿದ್ದಾನೆ. ಘಟನೆ ಕುರಿತು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply