ಬೆಳಗಾವಿ-ದಿನೇಶ್ ಕಲ್ಲಹಳ್ಳಿ ದೂರು ವಾಪಸ್ ಪಡೆದ ಬೆನ್ನಿನಲ್ಲಿ ರಮೇಶ್ ಜಾರಕಿಹೊಳಿ ಸಹೋದರ ಬಾಲಚಂದ್ರ ಜಾರಕಿಹೊಳಿ ಮಹತ್ವದ ಸುದ್ದಿಗೋಷ್ಠಿ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್ ನಲ್ಲಿ ಮಾತನಾಡಿದ ಅವರು , ಇದೊಂದು ಪಕ್ಕಾ‌‌ ಪ್ಲಾನ್ ಮಾಡಿಕೊಂಡು ‌ಮಾಡಿದ ಹನಿ ಟ್ರ್ಯಾಪ್ ರೀತಿಯ ಕಲೆಸ ಇಲ್ಲಿ ನಮ್ಮ ಕುಟುಂಬವನ್ನು ಮುಗಿಸುವ ಹುನ್ನಾರ ನಡೆದಿದೆ ಎಂದು ಗಂಭೀರವಾದ ಆರೋಪ ಮಾಡಿದ್ದಾರೆ. ಅಲ್ಲದೆ ಇದಕ್ಕೆ ಹಲವಾರು ಜನರು ಕಲೆಸ ಮಾಡಿದ್ದು ಇದರ ಹಿಂದೆ ಒಂಬತ್ತು ಜನ ಪ್ರಭಾವಿಗಳು ಕೆಲಸ ಮಾಡಿದ್ದಾರೆ. ರಮೇಶ್ ಜಾರಕಿ ಹೊಳಿ ಅವರು ಮನೆಯಿಂದ ಹೊರ ಬಂದ ಜನರ ಮುಂದೆ ಏನು ನಡೆದಿದೆ ಎಂದು ಹೇಳಬೇಕು, ಮೊದಲು ಈ ಬಗ್ಗೆ ಸಿಬಿಐ ತನಿಖೆ ಆಗಬೇಕು ಎಂದಿದ್ದಾರೆ.

 ಇದು ಒಂದು ನಕಲಿ ಸಿಡಿ ಅದರಲ್ಲಿ ಇರುವುದು ರಮೇಶ್ ಜಾರಕಿಹೊಳಿ ಅಲ್ಲಾ ಎಂದು ಸ್ಪಷ್ಟಪಡಿಸಿದರು. ದಿನೇಶ್ ಕಲ್ಲಹಳ್ಳಿ ಅವರಿಗೆ ಈ ಪ್ರಕರಣದಲ್ಲಿ ಹೆಚ್ಚಿನ ಮಾಹಿತಿ ಇಲ್ಲಾ. ಹೀಗಾಗಿ ಅವರಿಗೆ ಮಹಿಳೆಯಬಗ್ಗೆ ಯಾರು ಎಂಬುದು ಗೊತಿಲ್ಲಾ, ಅವರು ಯಾರೋ ಹೇಳಿದ ಹಾಗೆ ಕೇಳಿದ್ದಾರೆ. ಅವರು ಈಗಾಗಲೇ ದೂರು ವಾಪಸ್ ಪಡೆದುಕೊಂಡಿದ್ದಾರೆ. ಹೀಗಾಗಿ ಮಾನನಷ್ಟ ಮೊಕದ್ದಮೆ ಹಾಕಬೇಕು ಬೇಡವೋ ಎಂಬುದನ್ನು ಚರ್ಚೆ ಮಾಡಲಾಗುವುದು, ಮೊದಲ ಆ ಸಿಡಿ ಅಸಲಿಯೋ ನಕಲಿಯೋ ಪತ್ತೆ ಮಾಡಬೇಕಿದೆ. ಆ ಯುವತಿಗೆ 50 ಲಕ್ಷ ಹಣದ ಆಮಿಷ ಒಡ್ಡಿದ್ದಾರೆ. ಅಲ್ಲದೇ ದುಬೈ ನಲ್ಲಿ ಮನೆ ಹೀಗೆ ಅನೇಕ ಆಮಿಷ ಇಟಿದ್ದಾರೆ. ಯುವತಿ ಸಂತ್ರಸ್ತೆ ಅನ್ನಬೇಡಿ ಅವಳು ಸಂತ್ರಸ್ತೆ ಅಲ್ಲಾ. ನಿಜವಾಗಿಯೂ ಅವಳು ಸಂತ್ರಸ್ತೆ ನಿಜವಾಗಿಯೂ ಆಗಿದ್ದರೆ ಎಲ್ಲರೂ ಸೇರಿ ಅವಳಿಗೆ‌ ನ್ಯಾಯ ಕೊಡಿಸೋಣ ಎಂದಿದ್ದಾರೆ…

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply