ಮಹಾ ಮಳೆಗೆ 15 ಜನರ ಬಲಿ

0

ಮುಂಬೈ

ಮಹಾರಾಷ್ಟ್ರದಲ್ಲಿ ಕಳೆದ ಒಂದು ವಾರದಿಂದ ಧಾರಾಕಾರವಾಗಿ ಸುರಿಯುತ್ತಿರುವ ವರ್ಷಧಾರೆಗೆ 15 ಜನ ಬಲಿಯಾಗಿದ್ದಾರೆ. ಮಹಾರಾಷ್ಟ್ರದ ರಾಜಧಾನಿ ಮುಂಬೈ ನಗರ ವರುಣನ ಆರ್ಭಟಕ್ಕೆ ಸಂಪೂರ್ಣವಾಗಿ ತತ್ತರಿಸಿ ಹೋಗಿದೆ. ಪ್ರಮುಖ ರಸ್ತೆಗಳು ನದಿಗಳಂತಾಗಿವೆ. ಮಳೆಯಿಂದ ಸಾಮಾನ್ಯ ಜನರ ಜೀವನಾಡಿಯಾಗಿರುವ ಲೋಕಲ್ ಟ್ರೇನ್ ಕೂಡ ಬಂದ ಮಾಡಲಾಗಿದೆ.

ಮುಂಬೈನ ಭರತ ನಗರದಲ್ಲಿ ನಿರಂತರ ಮಳೆಗೆ ಕಟ್ಟಡದ ಗೋಡೆ ಕುಸಿದು 12 ಜನ ಸಾವನ್ನಪ್ಪಿದ್ದು, 15 ಜನರನ್ನು ರಕ್ಷಣೆ ಮಾಡಲಾಗಿದೆ.  ವಿಕ್ರೋಳಿಯಲ್ಲಿ ಕಟ್ಟಡ ಕುಸಿದು ಮೂವರು ಸಾವನ್ನಪ್ಪಿದ್ದ 6 ಜನರನ್ನು ರಕ್ಷಣೆ ಮಾಡಲಾಗಿದೆ. ಗಾಂಧೀ ಮಾರ್ಕೆಟ್, ದಾದರ ಹಾಗೂ ಚೆಂಬೂರ್ ಸೇರಿದಂತೆ ಮುಂಬೈನ ಹಲವು ಬಡಾವಣೆಗಳು ಮಹಾ ಮಳೆಗೆ ಪ್ರವಾಹ ಉಂಟಾಗಿದೆ.

ರಸ್ತೆಗಳು ಹಾಗೂ ರೈಲು ಹಳಿಗಳು ಸಂಪೂರ್ಣ ಜಲಾವೃತಗೊಂಡಿದ್ದು, ಈ ಭಾಗದಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಎನ್ ಡಿಆರ್ಎಫ್ ತಂಡ ಮುಂಬಯಿ ನಗರದಲ್ಲಿ ಬೀಡು ಬಿಟ್ಟಿದ್ದು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಇನ್ನೂ ಮುಂದಿನ 24 ಗಂಟೆಗಳ ಕಾಲ ಮಳೆ ಸುರಿಯಲಿದೆ ಅಂತಾ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply