ಕಾರವಾರ :-ಮೀನಿನ ಲಾರಿಯಲ್ಲಿ 9 ಲಕ್ಷ ರೂ ಮೌಲ್ಯದ ಅಕ್ರಮ‌ ಗೋವಾ ಮದ್ಯ‌ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಅಬಕಾರಿ ಸಿಬ್ಬಂದಿ ಲಾರಿ ಸಹಿತ ಓರ್ವನನ್ನು ವಶಕ್ಕೆ ಪಡೆದಿರುವ ಘಟನೆ ಕಾರವಾರದ ಮಾಜಾಳಿ ಗೇಟ್ ಬಳಿ ನಡೆದಿದೆ.

ಗೋವಾದಿಂದ ಆಗಮಿಸಿದ ಮೀನಿನ‌ ಲಾರಿಯಲ್ಲಿ 300 ಕ್ಕೂ ಹೆಚ್ಚು ಖಾಲಿ ಟ್ರೇ ಗಳು ಇರುವುದನ್ನು ಕಂಡು ಅನುಮಾನಗೊಂಡ ಅಬಕಾರಿ ಸಿಬ್ಬಂದಿ ತಪಾಸಣೆ ನಡೆಸಿದ್ದರು.

ಈ ವೇಳೆ ಟ್ರೇ ಗಳ ಮಧ್ಯೆ ಸುಮಾರು 505 ಲೀಟರ್ ನ 9.13 ಲಕ್ಷ ಮೌಲ್ಯದ ಗೋವಾ ಮದ್ಯ ಪತ್ತೆ ಹಚ್ಚಿದ್ದು, ಚಾಲಕ ಆಂದ್ರಪ್ರದೇಶ ಮೂಲದ ಸೂರ್ಯನಾರಾಯಣ ಮೂರ್ತಿ ಸಹಿತ ವಶಕ್ಕೆ ಪಡೆದಿದ್ದಾರೆ.

ಸಾಗಾಟಕ್ಕೆ ಬಳಸಿದ್ದ 16 ಲಕ್ಷ
ಮೌಲ್ಯದ ಕಂಟೇನರ್ ಲಾರಿ, 90 ಸಾವಿರ ಮೌಲ್ಯದ ಪ್ಲಾಸ್ಟಿಕ್ “ಟ್ರೇ”ಸೇರಿ 25 ಲಕ್ಷ ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆದು ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Email

Ravi Ravi

About Author

Ravi Ravi

Leave A Reply