ಗದಗ-  ಶಿಗ್ಲಿ ಬಸ್ಯಾ ನಿಮಗೆಲ್ಲಾ ಗೊತ್ತೆ ಇದೆ. ಹೌದು ಪೊಲೀಸರ ಮನೆ ನ್ಯಾಯಾಧೀಶರ ಮನೆ ಕಳ್ಳತನ ಮಾಡುವುದರಲ್ಲಿ ಈತ ಎತ್ತಿದ ಕೈ ಅಷ್ಟೇ ಯಾಕೆ ತನ್ನ ದಾಖಲಾದ ಪ್ರಕರಣಗಳಲ್ಲಿ ತಾನೇ ನ್ಯಾಯಾಲಯದಲ್ಲಿ ವಾದ ಮಂಡನೆ ಮಾಡಿ ಅನೇಕ ಪ್ರಕರಣಗಳಲ್ಲಿ ಕುಲಾಸೆ ಆಗಿದ್ದುಂಟು ಈ ಶಿಗ್ಲಿ. ಆದ್ರೆ ಈಗ ಶಿಗ್ಲಿ ಬಸ್ಯಾ ಮತ್ತೆ ಕಳ್ಳತನ ಮಾಡಿ ಸುದ್ದಿ ಆಗಿಲ್ಲಾ ಬದಲಿಗೆ ಅವರ ಪತ್ನಿ ಗ್ರಾಮ ಪಂಚಾಯತಿಯಲ್ಲಿ ಭರ್ಜರಿ ಗೆಲುವ ಸಾದಿಸುವ  ಮೂಲಕ ಈ ಕುಟುಂಬ ಈಗ ಸುದ್ದಿಯಾಗಿದೆ. ಹೌದು ಗದಗ ಜಿಲ್ಲೆಯ ಲಕ್ಶ್ಮಶ್ವರ ತಾಲೂಕಿನ ಶಿಗ್ಲಿ ಗ್ರಾಮ ಪಂಚಾಯತಿ ವಾರ್ಡ್ ನಂಬರ್ ೧ ರಿಂದ ಕಣಕ್ಕೆ ಇಳಿಸಿದ್ದ . ಯಾರಿಗೂ ಒಂದೇ ಒಂದು ರೂಪಾಯಿ ಹಣ ನೀಡದೇ ಶಿಗ್ಲಿ ಬಸ್ಯಾ ಅವರ ಪತ್ನಿ ಗುಲ್ಜಾರ್ ಬಾನು ಶೇಖ್ ಜಯಭೇರಿ ಬಾರಿಸಿದ್ದಾರೆ. ಇನ್ನು ಪ್ರ ವರ್ಗ ಒಂದು ಮಹಿಳಾ ಮೀಸಲಾತಿ ಇರುವ ವಾರ್ಡ್ ನಲ್ಲಿ ಒಟ್ಟು ಮೂರು ಜ‌ನ ಅಭ್ಯರ್ಥಿಗಳು ಕಣದಲ್ಲಿದ್ದು ಆ ಇಬ್ಬರನ್ನೂ ಹಿಂದಕ್ಕೆ ಗಾಕಿ ಶಿಗ್ಲಿ ಬಸ್ಯಾ ಅವರ ಪತ್ನಿ ಜಯ ಗಳಿಸಿದ್ದಾರೆ. ಗೆದ್ದ ಬಳಿಕ ಸಂಭ್ರಮಾಚರಣೆ ಮಾಡದೆ ನೇರವಾಗಿ ಜನರ ಬಳಿ ಬಂದು ಗ್ರಾಮದ ಜನರಿಗೆ  ಸರ್ಕಾರದ ಸವಲತ್ತುಗಳನ್ನು ನೀಡಿ ಜನರ ಸೇವೆ ಮಾಡುವುದಾಗಿ ಹೇಳಿದ್ದು ಮತ್ತೊಂದು ವಿಷೇಶವಾಗಿತ್ತು ….

Leave A Reply