ಬಳ್ಳಾರ

ಗೋ ಹತ್ಯೆ ನಿಷೇಧ ಕಾಯಿದೆಯನ್ನ ಜಾರಿಗೆ ತಂದೇ ತೀರುತ್ತೇವೆ. ಅದನ್ನ ಯಾರಿಂದಲೂ ತಡೆಯೋಕೆ ಆಗೋಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಸ್ಪಷ್ಟನೆ ನೀಡಿದ್ದಾರೆ. ಬಳ್ಳಾರಿಯಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದ ಸಚಿವ ಶ್ರೀರಾಮುಲು ಅವರು, ಕಾಂಗ್ರೆಸ್ ನ ಕೆಲ ನಾಯಕರು ಈ ಗೋ ಹತ್ಯೆ ನಿಷೇಧ ಕಾಯಿದೆಗೆ ವಿರೋಧ ವ್ಯಕ್ತಪಡಿಸಿದ್ದು ಬಿಟ್ಟರೆ ಉಳಿದವರು ಸಂಪೂರ್ಣ ಬೆಂಬಲ ನೀಡಿದ್ದಾರೆ. ಹೀಗಾಗಿ, ಗೋ ಹತ್ಯೆ ನಿಷೇಧ ಕಾಯಿದೆಯನ್ನ ಜಾರಿಗೆ ತಂದೇ ತೀರುತ್ತೇವೆ ಎಂದ್ರು ಸಚಿವ ಶ್ರೀರಾಮುಲು. ಈ ದೇಶದಲ್ಲಿ ಮುಕ್ಕೋಟಿ ದೇವರ ರೀತಿಯಲ್ಲಿ ಗೋಮಾತೆಯನ್ನ ಪೂಜಿಸುತ್ತೇವೆ.‌ ಹೀಗಾಗಿ, ನಾನಾ ರಾಜ್ಯಗಳಲ್ಲಿ ಈ ಗೋ ಹತ್ಯೆ ನಿಷೇಧ ಕಾಯಿದೆ ಜಾರಿಗೆ ತರಲಾಗುತ್ತಿದೆ. ಹೀಗಾಗಿ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗೋ ಹತ್ಯೆ ನಿಷೇಧ ಕಾಯಿದೆಯನ್ನ ಜಾರಿಗೆ ತರೋದಾಗಿ ಹೇಳಿದ್ವಿ. ಅದರಂತೆ ಜಾರಿಗೆ ತಂದಿದ್ದೇವೆ. ಕಾಂಗ್ರೆಸ್ ನವರು ಓಟ್ ಬ್ಯಾಂಕ್ ಕಳೆದುಕೊಳ್ಳುತ್ತೇವೆ. ಅನ್ನೋ ಸ್ವಾರ್ಥ ರಾಜಕ್ಕಾರಣಕ್ಕಾಗಿ ಗೋ ಹತ್ಯೆ ನಿಷೇಶ ಕಾಯಿದೆ ವಿರೋಧಿಸುತ್ತಿದ್ದಾರೆ. ಕಾಂಗ್ರೆಸ್ ಸ್ವಾರ್ಥ ರಾಜಕಾರಣಕ್ಕಾಗಿ ಗೋ ಹತ್ಯೆ ಕಾಯಿದೆಯನ್ನ ವಿರೋಧಿಸುತ್ತಿದ್ದಾರೆ. ಪುಕ್ಕಟೆ ಪ್ರಚಾರಕ್ಕಾಗಿ ಕಾಂಗ್ರೆಸ್ ವಿನಾಃ ಕಾರಣ ಈ ರೀತಿ ಆರೋಪ ಮಾಡ್ತಿದೆ. ಜೆಡಿಎಸ್ ಬಗ್ಗೆ ಸಾಪ್ಟ್ ಕಾರ್ನರ್ ಇಲ್ಲ.‌ ಅವರ ಮನಸ್ಥಿತಿ, ನಮ್ಮ ಮನಸ್ಥಿತಿ ಒಂದೇ ಆಗಿದೆ. ಹೀಗಾಗಿ, ಸಭಾಪತಿ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿಗೆ ಬೆಂಬಲ ನೀಡಿದೆ ಎಂದ್ರು ಸಚಿವ ಶ್ರೀರಾಮುಲು.

About Author

Priya Bot

Leave A Reply