ಬಳ್ಳಾರಿ- ಸದಾಕಾಲ ಸಮಾಜಮುಖಿ ಕೆಲಸ ಮಾಡುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಈಗ ಮತ್ತೊಂದು ವಿನೂತನ ಕೆಲಸಕ್ಕೆ ಕೈ ಹಾಕಿದೆ. ಗಣಿ ನಾಡು ಬಳ್ಳಾರಿ ಜಿಲ್ಲೆಯ ಸುಮಾರು 380 ದೇವಸ್ಥಾನ ಸೇರಿದಂತೆ ಪ್ರಾರ್ಥನೆ ಮಂದಿರ ಚರ್ಚ್ ಗಳ ಸ್ವಚ್ಚತಾ ಕಾರ್ಯಕ್ಕೆ ಕೈ ಹಾಕಿದೆ. ಈ ಹಿನ್ನೆಲೆಯಲ್ಲಿ  ಬಳ್ಳಾರಿಯಲ್ಲಿ ತಾಲೂಕಿನ ಎತ್ತಿನ ಬೂದಿಹಾಳ್ ವಲಯದ ಬುಗಟ್ಟಿ ಕಾರ್ಯಕ್ಷೇತ್ರದ ಈಶ್ವರ ದೇವಸ್ಥಾನ ಮತ್ತು ಯಾಳವರ್ ಮಾರಮ್ಮ ದೇವಿ ದೇವಸ್ಥಾನದ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯ ಮಾಡಿದ್ದಾರೆ. 

ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಳ್ಳಾರಿ ಜಿಲ್ಲೆಯ ಗೌರವನಿತ ನಿರ್ದೇಶಕರಾದ ಚಂದ್ರಶೇಖರ ಶೆಟ್ಟಿ ಹಾಗೂ ತಾಲೂಕಿನ ಯೋಜನಾ ಅಧಿಕಾರಿಗಳಾದ ಟಿವಿಎಸ್ ಸಿದ್ದಗಂಗಯ್ಯ ಮತ್ತು ದೇವಸ್ಥಾನ ಆಡಳಿತ ಮಂಡಳಿ ಹಾಗೂ ಊರಿನ ಗ್ರಾಮಸ್ಥರು ಭಾಗಿಯಾಗಿದ್ದರು.  ಸಹಾಯ ಸಂಘದ ಸದಸ್ಯರು ಹಾಗೂ ಮೇಲ್ವಿಚಾರಕರಾದ ವಿನೋದ್ ಅವರು ಉಪಸ್ಥಿತರಿದ್ದರು ಈ ಕಾರ್ಯಕ್ರಮದ  ಚಾಲನೆಯನ್ನು ಜಿಲ್ಲಾ ನಿರ್ದೇಶಕರಾದ ಚಂದ್ರಶೇಖರ್ ಶೆಟ್ಟಿ ಅವರು ನೀಡಿದ್ದರು.  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಳ್ಳಾರಿ ಜಿಲ್ಲೆಯಲ್ಲಿ ಜನವರಿ 7  ರಿಂದ ಜನವರಿ 14 ಮಕರ ಸಂಕ್ರಮಣ ಒಳಗಡೆ ಸುಮಾರು 380 ದೇವಸ್ಥಾನದ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರಲ್ಲಿ 22 ಮಸೀದಿ 5 ಚರ್ಚುಗಳು ಕೂಡ ಸೇರಿ ಒಟ್ಟು 380 ಮಂದಿರಗಳ ಸ್ವಚ್ಚತಾ ಕಾರ್ಯ ನೆಡೆಯಲಿದೆ. ಇನ್ನು ಈ  ಕಾರ್ಯಕ್ರಮದಿಂದ ಸುಮಾರು 16000 ಜನ ಭಾಗವಹಿಸಿ ಸೇವೆಯನ್ನು ಸಲ್ಲಿಸುತ್ತಾರೆ ಈ ಕಾರ್ಯಕ್ರಮದಿಂದ ದೇವಸ್ಥಾನ ಪವಿತ್ರತೆ ಮತ್ತು ಮನಸ್ಸಿಗೆ ಶಾಂತಿ ನೆಮ್ಮದಿ ಮನಕುಲಕ್ಕೆ ಉತ್ತಮವಾದ ವಾತಾವರಣವನ್ನು ನಿರ್ಮಾಣವಾಗಲಿದೆ.‌‌…

About Author

Priya Bot

Leave A Reply