ಮಂಗಳೂರು  – ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಸಂಘ ಪರಿವಾರ ಸಂಘಟನೆಯ ಕಾರ್ಯಕರ್ತರು ತಮ್ಮ ಪ್ರಾಣದ ಪರಿವೆಯೇ ಇಲ್ಲದೆ ಕೊರೊನಾ ಸೊಂಕಿನಿಂದ ಮೃತಪಟ್ಟ ದುರ್ದೈವಿಗಳ ಅಂತ್ಯಸಂಸ್ಕಾರದಲ್ಲಿ ಸಕ್ರಿಯವಾಗಿ ಸೇವಾ ನಿರತರಾಗಿದ್ದಾರೆ.  ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರ ಅಧ್ಯಕ್ಷತೆಯ ಸಮಾಜಮುಖಿ ಸೇವಾಸಂಸ್ಥೆ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಜರಂಗದಳದ 25 ಕಾರ್ಯಕರ್ತ ಬಂಧುಗಳಿಗೆ 5 ಲಕ್ಷ ರೂಪಾಯಿ ಮೊತ್ತದ ಕೊರೊನಾ ಕವಚ್ ಜೀವವಿಮೆ ಪಾಲಿಸಿಯನ್ನು ಮಾಡಲಾಗಿದೆ.

ಅದರೊಂದಿಗೆ ಟ್ರಸ್ಟ್ ವತಿಯಿಂದ ಪಿಪಿಇ ಕಿಟ್ಸ್, ಕೈಕವಚ, ಸ್ಯಾನಿಟೈಜರ್ಸ್ ಮತ್ತು ಇತರ ಅಗತ್ಯ ಇರುವ ವಸ್ತುಗಳನ್ನು ನೀಡಲಾಯಿತು. ಬಜರಂಗದಳದ ಕಾರ್ಯಕರ್ತರು ಕೊರೊನಾದಿಂದ ಮೃತಪಟ್ಟವರ ಮೃತದೇಹಗಳನ್ನು ಆಸ್ಪತ್ರೆಯಿಂದ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ವಿಧಿವತ್ತಾಗಿ ಅಂತ್ಯಸಂಸ್ಕಾರವನ್ನು ನಡೆಸುವ ಕಾರ್ಯ ಮಾಡ್ತಿದ್ದಾರೆ. ಇವರಿಗೆ ಜೀವವಿಮೆ ಮಾಡುವುದು ಅತ್ಯಗತ್ಯ ಎಂದು ಮನಗಂಡ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಅದರೊಂದಿಗೆ ಅಂತ್ಯಸಂಸ್ಕಾರಕ್ಕೆ ಅಗತ್ಯವಿರುವ ಸೌಕರ್ಯವನ್ನು ನೀಡಿ ಅವರ ಈ ಸೇವಾಕಾರ್ಯದಲ್ಲಿ ಕೈಜೋಡಿಸಿದೆ.

ಈಗಾಗಲೇ ಸ್ಮಶಾನದಲ್ಲಿ ಹೆಣ ಸುಡುವವರಿಗೆ ಮತ್ತು ಅವರ ಕುಟುಂಬದವರಿಗೆ ಟ್ರಸ್ಟ್ ವತಿಯಿಂದ ಪ್ರತ್ಯೇಕ ಜೀವವಿಮೆಯನ್ನು ಮಾಡಿದೆ. ಜೀವವಿಮಾ ಪಾಲಿಸಿಯ ದಾಖಲೆಗಳನ್ನು ಟ್ರಸ್ಟ್ ವತಿಯಿಂದ ಸಂಘಟನೆಯ ಪ್ರಮುಖರಾದ ಶರಣ್ ಪಂಪವೆಲ್, ಪುನೀತ್ ಪಂಪವೆಲ್ ಅವರಿಗೆ ಹಸ್ತಾಂತರಿಸಲಾಯಿತು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply