ರಾಯಚೂರ್ – ರಾಯಚೂರ್ ಜಿಲ್ಲೆಯ ಮಸ್ಕಿ ತಾಲೂಕಿನಲ್ಲಿ ಎನ್ ಆರ್ ಬಿ ಸಿ 5 ಎ ಕಾಲುವೆಯನ್ನು ಜಾರಿಗೆ ಮಾಡಬೇಕೆಂದು , ಜನವರಿ 9 ರಂದು ಮಸ್ಕಿ ಬಂದ್ ಗೆ ಕರೆ ನೀಡಿದ್ದಾರೆ. ನಿನ್ನೆ ಸುದ್ದಿಗಾರರೊಂದಿಗೆ, ಕರ್ನಾಟಕ ರಾಷ್ಟ್ರ ಪಕ್ಷದ ಉಪಾಧ್ಯಕ್ಷರಾದ ಎಸ್. ಹೇಚ್. ಲಿಂಗೇಗೌಡ ಮಾತನಾಡಿದರು.
ಕಳೆದ 12 ವರ್ಷಗಳಿಂದ ರೈತರು ಇದರಿಂದ ವಂಚಿತರಾಗಿದ್ದಾರೆ. ಎನ್ ಆರ್ ಬಿ ಸಿ 5 ಎ ಕಾಲುವೆಯ ಕೃಷ್ಣಾ ನೀರಿನೊಂದಿಗೆ ಜಾರಿ ಮಾಡುವಂತೆ ರೈತರು 12 ವರ್ಷಗಳಿಂದ ಹೇಳುತ್ತಾ ಬಂದಿದ್ದಾರೆ ಆದರೆ ಇದಕ್ಕೆ ಸರ್ಕಾರ ಮಾತ್ರ ತಲೆ ಕೆಡಿಸಿಕೊಂಡಿಲ್ಲ. ಪ್ರತಿ ಹೊಸ ಮುಖ್ಯಮಂತ್ರಿ ಅವರೊಂದಿಗೆ ಇದರ ಬಗ್ಗೆ ಪ್ರಸ್ತಾಪಮಾಡುತ್ತಾರೆ. ಆದರೆ ಇಲ್ಲಿ ವರೆಗೂ ಯಾವುದೇ ಪ್ರಯೋಜನೆ ರೈತರಿಗೆ ದೊತೆತ್ತಿಲ್ಲ ಹಾಗಾಗಿ ಇದರಿಂದ ಸಿಟ್ಟಿಗೆದ್ದ ರೈತರು ಮಸ್ಕಿ ಬಂದಗೆ ಕರೆ ಕೊಟ್ಟಿದ್ದಾರೆ
58 ಹಳ್ಳಿಗಳಲ್ಲಿ ಬರವಿದೆ. ಈ ಎಲ್ಲ ಹಳ್ಳಿಗಳ ಗ್ರಾಮದ ಜನರು ಹೋರಾಟಕ್ಕೆ ಸಮ್ಮತಿ ಸೂಚಿಸಿದ್ದಾರೆ. ಎನ್ ಆರ್ ಬಿ ಸಿ 5 ಎ ಕಾಲುವೆ ಜಾರಿಗೆ ಆಗುವವರೆಗೂ ಈ ಹೋರಾಟವನ್ನು ನಾವು ಮುಂದುವರೆಸುತ್ತೆವೆ ಜನವರಿ 9 ರಂದು ಮಸ್ಕಿ ಬಂದ ಮಾಡುತ್ತೆವೆ ಎಂದು ಕರ್ನಾಟಕ ರಾಷ್ಟ್ರ ಪಕ್ಷದ ಉಪಾಧ್ಯಕ್ಷರಾದ ಎಸ್. ಹೇಚ್. ಲಿಂಗೇಗೌಡ ಅವರು ಹೇಳಿದರು.