ಶಿವಮೊಗ್ಗ- ಬೆಂಗಳೂರ ಜನರ ನಿದ್ದೆ ಗೆಡಿಸಿದ್ದ ಬ್ರಿಟನ್ ರೂಪಾಂತರ ಕರೋನಾ ವೈರಸ್ ಈಗ ಶಿವಮೊಗ್ಗದ ಒಂದೇ ಕುಟುಂಬದ ನಾಲ್ವರಿಗೆ ವೈರಸ್ ಇರುವುದು ದೃಢವಾಗಿದೆ‌. ಈ ಬಗ್ಗೆ ಆರೋಗ್ಯ ಸಚಿವ ಸುಧಾಕರ ದಢಡಪಡಿಸಿದ್ದಾರೆ. ಈ ಬಗ್ಗೆ ಮಾಹಿತಜ ನೀಡಿದ ಅವರು ಬ್ರಿಟನ್ ಕೊರೊನಾ ವೈರಸ್ ಸೋಂಕು ತಗುಲಿದೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ರಾಜ್ಯಕ್ಕೆ ಬಂದ  ಯುಕೆ ವಾಪಸಿಗರ ಪೈಕಿ 107 ಜನರಿಗೆ ಆರ್.ಟಿ-ಪಿಸಿಆರ್ ಪರೀಕ್ಷೆ ಮಾಡಿದ್ದು ಅವರ ವರದಿ ಪಾಸಿಟಿವ್ ಬಂದಿತ್ತು. ಮತ್ತೆ  ಅವರ  ಮಾದರಿಯನ್ನ ಸೀಕ್ವೆನ್ಸ್ ಪರೀಕ್ಷೆ ಗೆ ಕಳಿಸಲಾಗಿತ್ತು . ಆದ್ರೆ  107ರಲ್ಲಿ  ಜನರಲ್ಲಿ 20 ಜನರಿಗೆ ರೂಪಾಂತರಿ ವೈರಸ್ ಕಂಡು ಬಂದಿದೆ ಎಂದು ಅಧಿಕೃತ ಮಾಹಿತಿ ನೀಡಿದ್ದಾರೆ. ಇನ್ನು ರಾಜ್ಯದಲ್ಲಿ ಈವರೆಗೂ ಒಟ್ಟು ಬೆಂಗಳೂರು 3 ಮತ್ತು ಶಿವಮೊಗ್ಗದ ನಾಲ್ವರಲ್ಲಿ ಹೊಸ ರೂಪಾಂತರ ವೈರಸ್ ಕಂಡು ಬಂದಿದ್ದು, ಸೋಂಕಿತರ ಸಂಪರ್ಕಿತರನ್ನ ಸಾಂಸ್ಥಿಕ ಕ್ವಾರಂಟೈನ್ ನಲ್ಲಿರಿಸಲಾಗಿದೆ ಎಂದಿದ್ದಾರೆ. ಜೊತೆಯಲ್ಲಿ ಈ ಏಳು ಜನರ ಪ್ರಾಥಮಿಕವಾಗಿ ಸಂಪರ್ಕ ಹೊಂದಿದವರನ್ನೂ ಸಹ ಕ್ವಾರೆಂಟೈನ್ ಮಾಡಲಾಗಿದೆ, ಅವರ ಆರ್ ಟಿನಪಿ ಸಿ ಆರ್ ಪರೀಕ್ಷೆ ನಡೆಸಲಾಗುತ್ತಿದೆ ಅವರ ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ‌ ಲಬಿಸಲಿದೆ ಎಂದಿದ್ದಾರೆ…

About Author

Priya Bot

Leave A Reply