ಬಳ್ಳಾರಿ- ಕಾರು ಮತ್ತು 2 ಬೈಕ್ ಗಳ  ನಡುವೆ ಭೀಕರ ಅಪಘಾತವಾಗಿದ್ದು ಸ್ಥಳದಲ್ಲೇ ಬೈಕ್ ಸವಾರರ ಇಬ್ಬರೂ ದಾರುಣ ಸಾವಿಗೀಡಾಗಿದ್ದಾರೆ. ಬಳ್ಳಾರಿ ಜಿಲ್ಲೆಯ ಕುರುಗೋಡು ಸಮೀಪದ ಸಿದ್ದಮ್ಮನಹಳ್ಳಿ ಬಳಿ ಈ  ಘಟನೆ ನಡೆದಿದ್ದು ಸ್ಕೂಟ್ ಯಲ್ಲಿದ್ದ ಕುರುಗೋಡು ನಿವಾಸಿಗಳಾದ ಶೇಕ್ ಪೀರೋಜಾ ಮತ್ತು ಈಕೆಯ ಗಂಡ ಯುಸೋಫ್ ಸ್ಥಳದಲ್ಲಿ ಸಾವಿಗೀಡಾಗಿದ್ದಾರೆ. ಮೃತರಿಬ್ಬರೂ ಕುರುಗೋಡ ಬ್ಯಾಂಕ್ ಸಿಬ್ಬಂದಿಗಳಾಗಿದ್ದ ಇವರು ಕೆಲಸ  ನಿಮಿತ್ತ ಕುರುಗೋಡು ಕಡೆಗೆ ತೆರಳುತಿದ್ದಾಗ ಅಫಘಾತ ಸಂಭವಿಸಿದೆ. ಇನ್ನೊಂದು ಬೈಕ್ ನಲ್ಲಿದ್ದ ಇಬ್ಬರು ಬೈಕ್ ನಿವಾಸಿಗಳಿಗೂ ಗಂಭೀರ ಗಾಯವಾಗಿದ್ದು, ಕಾರ್ ನಲ್ಲಿ ಸಂಚರಿಸುತ್ತಿದ್ದವರಿಗೂ ಸಹ  ಗಾಯಗಳಾಗಿದ್ದು, ಗಾಯಾಳುಗಳನ್ನು ಸ್ಥಳಿಯ  ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಕುಡತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave A Reply