ಹೊಸಪೇಟೆ- ಗಣಿ ನಾಡು ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದಲ್ಲಿ ನಿರಂತರವಾಗಿ , ಅಯೋಧ್ಯದಲ್ಲಿ ಪ್ರಭು ಶ್ರೀ ರಾಮ ಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಸಂಗ್ರಹ ಅಭಿಯಾನ ನಡೆಯುತ್ತಿದೆ. ಹೊಸಪೇಟೆ ನಗರದಲ್ಲಿಂದು  ಅನೇಕ ಗಣ್ಯರನ್ನು ಸಂಪರ್ಕಿಸಿ ದೊಡ್ಡ ಮೊತ್ತ ಸಂಗ್ರಹವನ್ನು ಮಾಡಲಾಯಿತು, ಈ ಅಭಿಯಾನದಲ್ಲಿ ಜಿಲ್ಲಾ  ದೊಡ್ಡ ಮೊತ್ತದ ಸಂಗ್ರಹದ ಪ್ರಮುಖರಾದ ಶ್ರೀಯುತ ಕೃಷ್ಣ ದೇವರಾಯರು ಹಾಗೂ  ಸಹ ಪ್ರಮುಖರಾದ ಶ್ರೀಯುತ ಅನಿಲ್ ಜೋಷಿ ಜಿಯವರು ಹಾಗೂ ಜಿಲ್ಲಾ ಸಂಪರ್ಕ ಪ್ರಮುಖರಾದ ಶ್ರೀ ಯುತ ರೇವಣ ಸಿದ್ದಪ್ಪ ರವರು ಮತ್ತು ಶ್ರೀ ಯುತ ಬಸವರಾಜ ಪಲ್ಲೆದ್ ,ಶ್ರೀ ರಮೇಶ್ ಗುಪ್ತರವರು, ಮನೋಹರ್ ಗುಪ್ತ ರವರು  ಭಾಗವಹಿಸಿದ್ದರು. ಕಳೆದ 15 ದಿನಗಳಿಂದ ನಗರದ ಎಲ್ಲ ಪ್ರಮುಖ ಪ್ರದೇಶದಲ್ಲಿ ಸಂಚರಿಸಿ ನದಿ ಸಂಗ್ರಹ ಕಾರ್ಯವನ್ನು ಮಾಡಲಾಗುತ್ತಿದೆ‌‌‌.

About Author

Priya Bot

Leave A Reply