ತನಗೆ ಕಚ್ಚಿದ ಹಾವನ್ನ ಹಿಡಿದುಕೊಂಡು ಆಸ್ಪತ್ರೆಗೆ ಬಂದ ಭೂಪ

0

ಬಳ್ಳಾರಿ – ಸಾಮಾನ್ಯವಾಗಿ ಹಾವು ಕಂಡರೆ ಮಾರುದ್ದು ಓಡಿ ಹೋಗುವ ಜನರ ಮಧ್ಯೆ, ತನಗೆ ಕಚ್ವಿದ ಹಾವುನ್ನು ಹಿಡಿದುಕೊಂಡು ಆಸ್ಪತ್ರೆಗೆ ಬಂದಿರುವ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಉಪ್ಪಾರಳ್ಳಿಯಲ್ಲಿ ನಡೆದಿದೆ. ಗ್ರಾಮದ ಕಾಡಪ್ಪಾ ಎಂಬ ವ್ಯಕ್ತಿ ಇಂದು ಮುಂಜಾನೆ ಮನೆಯಲ್ಲಿ ಮಲಗಿದ್ದ, ಈ ಸಮಯದಲ್ಲಿ ಹಾವು ಕಾಡಪ್ಪನ ಕಾಲಿಗೆ ಹಾವು ಕಚ್ಚಿದೆ. ಹಾವು ಕಚ್ಚಿದ ಹಿನ್ನೆಲೆಯಲ್ಲಿ ಎಚ್ಚರಗೊಂಡ ಕಾಡಪ್ಪಾ ಅವರು, ಪಕ್ಕದಲ್ಲಿ ಇದ್ದ ಹಾವುನ್ನು ಕಂಡಿದ್ದಾರೆ.

ಕೂಡಲೇ ಆ ಹಾವು ತಮ್ಮ ಕೈಯಲ್ಲಿ ಹಿಡಿದುಕೊಂಡು ಗ್ರಾಮದ ಮಧ್ಯದಲ್ಲಿಯೇ ನಡೆದುಕೊಂಡು ಆಸ್ಪತ್ರೆಗೆ ಬಂದಿದ್ದಾನೆ.‌ ಕಾಡಪ್ಪಾ ಹಾವು ಹಿಡಿದುಕೊಂಡು ಆಸ್ಪತ್ರೆಯ ಮುಂದೆ ಚಿಕಿತ್ಸೆಗಾಗಿ ಕಾದು ಕುಳಿತಿದ್ದು, ಆಸ್ಪತ್ರೆಯ ಗೆ ಬಂದ ಕಾಡಪ್ಪನ ಕೈಯಲ್ಲಿ ಇದ್ದ ಹಾವುನ್ನು ಕಂಡ ವೈದ್ಯರು ಹೌಹಾರಿದ್ದಾರೆ. ಆಸ್ಪತ್ರೆಯ ಮುಂದೆ ಹಾವು ಹಿಡಿದುಕೊಂಡು  ಕುಳಿತ ಕಾಡಪ್ಪಾನನ್ನು ನೋಡಲು ಜನ ಮುಗಿಬಿದಿದ್ದರು. ಬಳಿಕ ಆಸ್ಪತ್ರೆಯ ವೈದ್ಯರು ಕಾಡಪ್ಪನ ಕೈಯಲ್ಲಿ ಇದ್ದ ಹಾವುನ್ನು ಬಿಡಿಸಿ ಚಿಕಿತ್ಸೆ ನೀಡಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply