ನವದೆಹಲಿ- ಕಳೆದ ಹತ್ತು ವರ್ಷದ ಬಳಿಕ ಇದೇ ಮೊದಲ ಬಾರಿಗೆ ಬಂಗಾರದ ಮೇಲಿನ ಕಸ್ಟಂ ಡ್ಯೂಟಿ ಕಡಿಮೆ ಮಾಡಿದ್ದು ಹೀಗಾಗಿ ಬಂಗಾರದ ಬೆಲೆ ಕಡಿಮೆ ಆಗಲಿದೆ. ಪ್ರತಿ ವರ್ಷ ಕಸ್ಟಂ ಡ್ಯೂಟಿ ಹೆಚ್ಚಳವಾಗುತ್ತಲೇ ಇತ್ತು . ಪ್ರತಿ ವರ್ಷ ಶೇಕಡಾ ಎರಡು ಮೂರು ಪರ್ ಸೆಂಟ್ ಹೆಚ್ಚಳ ಮಾಡಲಾಗುತಿತ್ತು. ಆದ್ರೆ ಈ ವರ್ಷ ಬಂಗಾರದ ಬೆಲೆ ಮೇಲಿನ ಕಸ್ಟಂ ಡ್ಯೂಟಿ ಕಡಿಮೆ ಮಾಡಿದ್ದಾರೆ , ಹೀಗಾಗಿ ಪ್ರತಿ ಗ್ರಾಂ ಚಿನ್ನದ ಮೇಲಿನ ಬೆಲೆ ಪ್ರತಿ ಗ್ರಾಮಗೆ ನೂರು ರೂಪಾಯಿ ಇಂದು ನೂರೈವತ್ತು ರೂಪಾಯಿ ಬೆಲೆ ಕಡಿಮೆ ಆಗಲಿದೆ. ಹೀಗಾಗಿ ಬೆಲ ಕಡಿಮೆ ಮಾಡಿರುವುದು ಬಂಗಾರ ವ್ಯಾಪಾರಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಸದ್ಯ ಬಂಗಾರದ ಬೆಲೆ ಸುಮಾರು 51 ಸಾವಿರದ ಘಡಿ ದಾಟಿದೆ. ಇಂದು ಸಂಜೆ ಬಂಗಾರದ ನಿಖರವಾದ ಬೆಲೆ ಗೊತ್ತಾಗಲಿದೆ. ಇದರ ಜೊತೆಯಲ್ಲಿ ಬಂಗಾರದ ಮೇಲಿನ ಜಿ ಎಸ್ ಟಿ ಕಡಿಮೆ ಮಾಡಿದ್ರೆ ಬಂಗಾರದ ವ್ಯಾಪಾರ ಮತ್ತಷ್ಟು ಹೆಚ್ಚಳವಾಗಲಿದೆ ಎನ್ನುತ್ತಾರೆ ಬಂಗಾರದ ವ್ಯಾಪಾರಿಗಳ.