ಮೊಳಕೆ ಹಂತದಲ್ಲಿ ಸುಟ್ಟು ಹೋದ ಭತ್ತದ ಬೆಳೆ

0

ಮಂಗಳೂರು  – ಮಂಗಳೂರಿನ ಸುರತ್ಕಲ್  ಸಮೀಪದ ಸೂರಿಂಜೆ ಮತ್ತು ಕುತ್ತೆತ್ತೂರಿನಲ್ಲಿ ಭತ್ತದ ಬೆಳೆಗೆ ನೇಜಿ ಹಾಕಿದ ಸುಮಾರು ಆರು ಕಳಸೆ ಗದ್ದೆಯ ಬೀಜ ಮೊಳಕೆ ಹಂತದಲ್ಲಿ ಸುಟ್ಟು ಹೋದ ಚಿತ್ರಣ ಬೆಳಕಿಗೆ ಬಂದಿದೆ. ಎಂಆರ್ ಪಿಎಲ್ ನಿಂದ ಹರಿದು ಬಂದ ಕೆಮಿಕಲ್ ಯುಕ್ತ ನೀರು ಇದಕ್ಕೆ ಕಾರಣ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಬೊಳ್ಳಾರ ಗುತ್ತಿನ ಪ್ರಕಾಶ್ ಶೆಟ್ಟಿ ಎಂಬುವವರು ಕೃಷಿ ಇಲಾಖೆಯಿಂದ ಪಡೆದ ಭತ್ತವನ್ನು ಮೊಳಕೆ ಬರಿಸಿ ಬಿತ್ತಿದ್ದರು. ಇನ್ನೋರ್ವ ರೈತ ತಾನೇ ಸಿದ್ದಪಡಿಸಿದ ಭತ್ತವನ್ನು ಮೊಳಕೆ ಬರಿಸಿ ಬಿತ್ತಿದ್ದರು. ಇಬ್ಬರು ರೈತರು ಬಿತ್ತಿದ ಬೀಜವೂ ಸುಟ್ಟು ಕಪ್ಪು ಕಪ್ಪಾಗಿ ಹೋಗಿದೆ. ಎಂಆರ್ ಪಿಎಲ್ ಬಳಿಯ ಮೂಡುಪದವು ಸಮೀಪ ಒಸರುವ ತ್ಯಾಜ್ಯ ನೀರು ಕುತ್ತೆತ್ತೂರು ಮೂಲಕ ಹರಿದು ಸೂರಿಂಜೆಗೆ ಬರುತ್ತದೆ. ಇದರ ಪರಿಣಾಮ ಇಲ್ಲಿ ಕೃಷಿಗೆ ತೊಂದರೆಯಾಗಿ ರೈತರು ಕೃಷಿ ಮಾಡುವುದನ್ನೇ ಬಿಟ್ಟಿದ್ದಾರೆ.

ಈಗ ಸೂರಿಂಜೆ ರೈತರು ಮಾಡಿದ ಕೃಷಿ ಯತ್ನ ವಿಫಲವಾಗಿದೆ. ಇತ್ತೀಚೆಗೆ ಪೊನ್ನಗಿರಿ ಮಹಾಲಿಂಗೇಶ್ವರ ದೇವಳದ ಬಳಿ ನೀರಿನಲ್ಲಿ  ತೈಲದ ಅಂಶ ಕಂಡು ಬಂದಿದ್ದು, ಮೀನುಗಳು ಸತ್ತಿದ್ದವು. ಇಲ್ಲಿಂದ ನೀರಿನ ಸ್ಯಾಂಪಲ್ ಸಂಗ್ರಹಿಸಲಾಗಿತ್ತು. ಆದರೆ ಅದರ ಫಲಿತಾಂಶ ಇನ್ನೂ ಜನತೆಗೆ ತಿಳಿದಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply