ಜ.ಕಾ- ಉಗ್ರರು ಭಾರತದ ಮೇಲೆ ಮತ್ತೆ ದಾಳಿ‌ ಮುಂದುವರೆಸಿದ್ದು. ಇಂದು ಸಹ ತಮ್ಮ ಅಟ್ಟಹಸವನ್ನು ಮೇರೆದಿದ್ದಾರೆ. ಕಳೆದ ನಾಲ್ಕೈದು ತಿಂಗಳಿಂದ ಶಾಂತವಾಗಿದ್ದ ಕಾಶ್ಮೀರದಲ್ಲಿ ಮತ್ತೆ ಉಗ್ರರು ತಮ್‌ಬಾಲ ಬಚ್ಚಿದ್ದಾರೆ. ನಿನ್ನೆ ಉಗ್ರರು ಪುಲ್ವಾಮಾ ಜಿಲ್ಲೆಯಲ್ಲಿರುವ ಭದ್ರತಾ ಸೈನಿಕರ ಮೇಲೆ ಗ್ರೇನೇಡ್ ದಾಳಿ ಮಾಡಿದ್ದಾರೆ. ಪುಲ್ವಾಮ ಜಿಲ್ಲೆಯ ತ್ರಾಸ್ ಬಸ್ ನಿಲ್ದಾಣದ ಬಳಿ ಬಿಡು ಬಿಟ್ಟಿರುವ ಉಗ್ರರು ಭಾರತೀಯ ಸೈನಿಕ ಪಡೆಯ ಮೇಲೆ ಗ್ರೇನೇಡ್  ಎಸೆದು ಓಡಿಹೊಗಿದ್ದಾರೆ. ಇದರಲ್ಲಿ 7 ಮಂದಿ ಸ್ಥಳದಲ್ಲಿದ್ದ ನಾಗರೀಕರಿಗೆ ಗಂಭೀರವಾಗಿ ಗಾಯಗಳಾಗಿವೆ. ಗಾಯವಾದ ನಾಗರೀಕರನ್ನು ಸ್ಥಳೀಯ ಜಿಲ್ಲಾ ಆಸ್ಪತ್ರೆಗೆ ದಾಖಲೆಸಿದ್ದಾರೆ. ಇನ್ನು ಗ್ರೇನೇಡ್ ಎಸೆದು ಪರಾರಿಯಾದ ಉಗ್ರರನ್ನು ಹುಡುಕಲು  ಸೈನಿಕ ಪಡೆಗಳು ಕಾರ್ಯಾಚರನೆಯನ್ನು ಪ್ರಾರಂಭಿಸಿವೆ ಎಂಬ  ಮಾಹಿತಿ ತಿಳಿದು ಬಂದಿದೆ.

Leave A Reply