ಡೆನ್ವರ್ – ಆಗಸದಲ್ಲಿ ಚಲಿಸುತ್ತಿದ್ದ ವಿಮಾನದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಇಂಜನ್ ಸಂಪೂರ್ಣವಾಗಿ ಸುಟ್ಟು ಕರಕಲಾದರೂ ಮತ್ತೊಂದು ಇಂಜಿನ್ ಸಹಾದಿಂದ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ ಪೈಲಟ್ ಸುಮಾರು 241 ಜನರಪ್ರಾಣ ರಕ್ಷಣೆ ಮಾಡಿದ್ದಾನೆ. ಅಷ್ಟಕ್ಕೂ ಈ ಸಿನಿಮಿಯ ಘಟನೆ ನಡೆದಿದ್ದು ಅಮೇರಿಕಾದ ಡೆನ್ವರ್ ನಿಂದ ಹೊನೊಲುಗೆ ಹೊರಟಿದ್ದ ವಿಮಾನದಲ್ಲಿ. ನಿನ್ನೆ ಬೆಳಗಿನ ಜಾವಾ ಡೆನ್ವರ್ ನಿಂದ ಸುಮಾರು 230 ಪ್ರಯಾಣಿಕರು ಹಾಗೂ ಉಳಿದ ವಿಮಾನ ಚಾಲಕರು ಸಿಬ್ಬಂದಿ ಸೇರಿದಂತೆ ಒಟ್ಟು 241 ಜನರನ್ನು ಹೊತ್ತ ವಿಮಾನ ಡೆನ್ವರ್ ನಿಂದ ಟೇಕ್ ಆಫ್ ಆಗಿತ್ತು. ಸ್ವಲ್ಪ ಸಮಯದಲ್ಲಿ ವಿಮಾನದ ಬಲಗಡೆ ಇಂಜಿನ್ ನಲ್ಲಿ ತಾಂತ್ರಿಕ ದೋಷ ಕಂಡ ಬಂದ ಹಿನ್ನೆಲೆಯಲ್ಲಿ, ಇಂಜಿನ್ ಸಂಪೂರ್ಣವಾಗಿ ಹೊತ್ತಿ ಉರಿದಿದೆ.
ಅಲ್ಲದೇ ಇಂಜಿನ್ ಮೇಲಿನ ಹೊದಿಕೆ ಸಹ ಕಳಚಿ ಬಿದ್ದಿದೆ. ಆಗ ವಿಮಾನದಲ್ಲಿ ಇದ್ದ ಪ್ರಯಾಣಿಕರ ಇದು ನಮ್ಮ ಕೊನೆಯ ಕ್ಷಣ ಎಲ್ಲವೂ ಮುಗಿದೇ ಹೋಯಿತು ಎನ್ನುವ ಹೊತ್ತಿಗೆ, ವಿಮಾನದ ಪೈಲಟ್ ಧೈರ್ಯದಿಂದ ಹಾಗೂ ಸಮಯ ಪ್ರಜ್ಞೆಯಿಂದಾಗಿ ಪೈಲೆಟ್ ಏರ್ ಟ್ರಾಪಿಕ್ ಕಂಟ್ರೋಲ್ ಗೆ ಕರೆ ಮಾಡಿ ರನ್ ವೇ ಕ್ಲಿಯರ್ ಮಾಡಿಸಿದ್ದಾನೆ. ಬಳಿಕ ಮತ್ತೆ ವಿಮಾನವನ್ನು ರನ್ ವೇ ಗೆ ಸುರಕ್ಷಿತವಾಗಿ ಇಳಿಸುವ ಮೂಲಕ ವಿಮಾನದಲ್ಲಿ ಇದ್ದ 241 ಜನರ ಪ್ರಾಣ ಉಳಿಸಿದ್ದಾನೆ. ಇನ್ನು ಈ ಸಿನಿಮಿಯ ರೀತಿಯ ವಿಡಿಯೋ ಒಂದನ್ನು ವಿಮಾನದ ಪ್ರಯಾಣಿಕರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದು ಟ್ವೀಟ್ ಮಾಡಿದ್ದಾರೆ.
UNITED AIRLINES ENGINE FIRE pic.twitter.com/tDyDdEM03j
— FXHedge (@Fxhedgers) February 20, 2021