ಪಾಕಿಸ್ತಾನ ಸಿನಿಮಾಗೆ ಕಂಟ ದಾನ ಮಾಡಿದ ಗಾಯಕ

0

ನ್ಯೂಸ್ ಡೆಸ್ಕ್

ಕನ್ನಡ ಹಿಂದಿ ತೆಲುಗು ಹಾಗೂ ಮಲಯಾಳಂ ಸೇರಿದಂತೆ ಬಹುಭಾಷೆಗಳಲ್ಲಿ ಬಹುಬೇಡಿಕೆಯ ಗಾಯಕನಿಗೆ ಹುಟ್ಟುಹಬ್ಬದ ಸಂಭ್ರಮ.  ಹೌದು ಬಾಲಿವುಡ್ ನಲ್ಲಿ ತೀರಾ ಕಡಿಮೆ ಅವಧಿಯಲ್ಲಿ  ಸಾಕಷ್ಟು ಹೆಸರು ಮಾಡಿರುವ ಅರ್ಮಾನ್ ಮಲೀಕ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 22 ಜೂನ್ 1995 ರಲ್ಲಿ ಜನಿಸಿದ್ದಾರೆ. ಈ ವರೆಗೂ ಸುನಾರು 13 ಭಾಷೆಯಲ್ಲಿ ಹಾಡು ಹಾಡಿದ್ದಾರೆ.

ತಮ್ಮ ನಾಲ್ಕನೇ ವಯಸ್ಸಿನಲ್ಲಿ ಸಂಗೀತ ಆರಂಭ ಮಾಡಿದ ಇವರು 2006 ರಲ್ಕಿ ಝಿ ವಾಹಿನಿಯ ಸಾರೆಗಮಾಪಾ ಲೀಟಲ್ ಚಾಂಪ್ ನಲ್ಲಿ ಭಾಗಿಯಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ‌. ತಮ್ಮ ಹತ್ತನೇ ವಯಸ್ಸಿನಲ್ಲಿ ಬಾಸ್ಟನ್ ಸಂಗೀತ ಶಾಲೆಯಲ್ಲಿ ವೆಸ್ಟರನ್ ಸಂಗೀತ ಕಲಿತಿದ್ದಾರೆ. ಅದಾದ ಬಳಿಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಬಳಿಕ ಹಲವಾರು ಬಾಲಿವುಡ್ ಟಾಲಿವುಡ್ ಸ್ಯಾಂಡಲ್ವುಡ್ನಲ್ಲಿ ಬಹುತೇಕ ಹಾಡುಗಳನ್ನು ಹಾಡಿದ್ದಾರೆ.

ಇನ್ನು ಪಾಕಿಸ್ತಾನದ ಸಿನಿಮಾ ‘ ಜನಾನ್ ‘ ಹಾಡು ಹೇಳುವ ಮೂಲಕ ಸಂಗೀತಕ್ಕೆ ಯಾವುದೇ ಗಡಿಯ ಬೇದ ಇಲ್ಲ ಎಂದು ಸಾಬೀತು ಪಡಿಸಿದ್ದಾರೆ. ತಮ್ಮ ಇಳಿಯ ವಯಸ್ಸಿನಲ್ಲಿ ಅಪಾರ ಫ್ಯಾನ್ ಗಳನ್ನು ಹೊಂದಿರುವ ಅರ್ಮಾನ್ ಮಲಿಕ್ ಅವರು ಹೀಗೆ ಸಂಗೀತ ಸೇವೆಯನ್ನು ಮಾಡುತ್ತಾ ದೇಶದ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಹಾರಿಸಲಿ.

 

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply