ವಿಜಯಪುರ – ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮದ ಮನೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಶವವಾದ ಮಹಿಳೆ ಶರಣಮ್ಮ ವಿರೇಶ್ ಪಾಟೀಲ್, ವಯಸ್ಸು 35 ಎಂದು ಗುರುತಿಸಲಾಗಿದೆ.
ಶರಣಮ್ಮ ಗಂಡನ ಮನೆಯಲ್ಲಿ ಒಬ್ಬಳೆ ಇದ್ದಳು, ಗಂಡ ಮತ್ತು ಮನೆಯವರು ವಿಜಯಪುರದಲ್ಲಿ ವಾಸವಾಗಿದ್ದಾರೆ. ಇನ್ನು ಶರಣಮ್ಮಳನ್ನು ಗಂಡನ ಮನೆಯವರು ದೂರವಿಟ್ಟಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇನ್ನು ಶರಣಮ್ಮಳನ್ನು ಒಬ್ಬಂಟಿಯಾಗಿಡಲು ಕಾರಣ ಏನೆಂದು ತಿಳಿದು ಬಂದಿಲ್ಲ. ಶರಣಮ್ಮಳನ್ನು ಗಂಡ ಮತ್ತು ಆತನ ಮನೆಯವರೆ ಕೊಲೆ ಮಾಡಿದ್ದಾರೆಂದು ಶರಣಮ್ಮ ಪೋಷಕರು ಆರೋಪ ಮಾಡುತ್ತಿದ್ದಾರೆ.
ಶರಣಮ್ಮ ತವರು ಮನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಚೊಂಚಿ, ನಾಲ್ಕು ವರ್ಷಗಳ ಹಿಂದೆ ಶರಣಮ್ಮ ಮತ್ತು ವಿರೇಶ್ ಪಾಟೀಲ್ ವಿವಾಹವಾಗಿತ್ತು. ಮಹಿಳೆಯ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಸಿಂದಗಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರೀಶಿಲನೆ ನಡೆಸಿದ್ದಾರೆ. ಇನ್ನು ಶರಣಮ್ಮ ಅವರ ಪೋಷಕರು ಅನುಮಾನ ಪಟ್ಟಂತೆ ಕೊಲೆಯೂ ಅಥವಾ ಆತ್ಮಹತ್ಯೆಯೂ ಎಂಬುದು ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿದ ಪೋಲೀಸರು ತನಿಖೆ ಆರಂಭಿಸಿದ್ದಾರೆ.