ಬಳ್ಳಾರಿ- ಸನ್ಮಾರ್ಗ ಗೆಳೆಯರ ಬಳಗದಿಂದ ಕೊರೆಯುವ ಚಳಿಗೆ ನಡುಗುವ ಬೀದಿಬದಿಯ ಮಂದಿಗೆ ಬೆಚ್ಚನೆಯ ಹೊದಿಕೆ ಹಾಗೂ ಶೆಟರ್ ಅನ್ನ ಉಚಿತವಾಗಿ ವಿತರಿಸ ಲಾಯಿತು.ಡಿಸೆಂಬರ್ 31 ರಂದು ತಡರಾತ್ರಿ ಗ್ರಾಮೀಣ ಠಾಣೆಯ ಪಿಎಸ್ ಐ ವೈ.ಎಸ್.ಹನುಮಂತಪ್ಪ ನೇತೃತ್ವದ ತಂಡವು ಬಳ್ಳಾರಿ ನಗರದ ಕಾಳಮ್ಮ ಬೀದಿ, ಬಸವೇಶ್ವರ ವೃತ್ತ, ಹೊಸ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಗಡಿಗಿ ಚೆನ್ನಪ್ಪ ವೃತ್ತ, ಹಳೆ ಬಸ್ ನಿಲ್ದಾಣ, ಕನಕ ದುರ್ಗಮ್ಮ ದೇಗುಲ, ಎಸ್.ಪಿ.ವೃತ್ತದ ಫುತ್ ಪಾತ್ ನಲ್ಲಿ ಬೆಚ್ಚನೆಯ ಹೊದಿಕೆ ಇಲ್ಲದೇ ಕೊರೆಯುವ ಚಳಿಯಲ್ಲಿ ಮಲಗಿರುವ ನಿರ್ಗತಿಕರಿಗೆ ಬೆಚ್ಚನೆಯ ಹೊದಿಕೆ ವಿತರಿಸೊ ಮುಖೇನ ಸಹಯ ಹಸ್ತ ಚಾಚಿದ್ದಾರೆ. ಸನ್ಮಾರ್ಗ ಗೆಳೆಯರ ಬಳಗದ ಕಾರ್ಯದರ್ಶಿ ಕಪ್ಪಗಲ್ಲು ಬಿ.ಚಂದ್ರಶೇಖರ ಆಚಾರ್, ಖಜಾಂಚಿ ತೇಜಾ ರಘು ರಾಮರಾವ್, ಹಾಸ್ಯ ಕಲಾವಿದ ಎ.ಎರ್ರಿಸ್ವಾಮಿ, ಮುಖಂಡರಾದ ಸತ್ಯನಾರಾಯಣ, ರಮೇಶ, ಅಶೋಕ ಭಂಡಾರಿ, ಮಹೇಶ, ರಾಧಾಕೃಷ್ಣ, ಜೆ.ಪಿ.ಮಂಜುನಾಥ, ಮಿಥುನ್, ಕೆ.ವಿಶ್ವನಾಥ, ಸೂರಜ್ ಇದ್ದರು.

About Author

Priya Bot

Leave A Reply