ಹುಬ್ಬಳ್ಳಿ- ಸಣ್ಣ ನೀರಾವರಿ ಇಲಾಖೆಯ ಎಇಇ ದೇವರಾಜ ಕೆ. ಶಿಗ್ಗಾವಿ ಅವರ ನಿವಾಸ ಮತ್ತು ತಾಯಿ ಹಾಗೂ ಮಾವನ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ಇಂದು ಬೆಳಗ್ಗೆ ಏಕಕಾಲಕ್ಕೆ ದಾಳಿ ಮಾಡಿ, ಆದಾಯಕ್ಕಿತ ಹೆಚ್ಚಿನ ಚರ-ಚಿರಾಸ್ತಿಯ ದಾಖಲಾತಿಗಳನ್ನು ಪರಿಶೀಲನೆ ನಡೆಸಿದ್ದಾರೆ

ದೇವರಾಜ ಅವರ ಇಲ್ಲಿನ ಅಕ್ಷಯ ಪಾರ್ಕ್ ಬಳಿಯ ರಾಜೀವ ನಗರ ನಿವಾಸ ಹಾಗೂ ಇವರ ತಾಯಿಯ ಗೋಕುಲ ರಸ್ತೆ ಕೋಟಿಲಿಂಗನಗರ ಹಾಗೂ ಇವರ  ಮಾವನ ಬೆಂಗೇರಿ ಬಳಿಯ ಬಾಲಾಜಿ ನಗರದ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿ, ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾರೆ.

ಕಂತೆ ಕಂತೆ ನೋಟುಗಳು ಕಂಡು ಎಸಿಬಿ ಅಧಿಕಾರಿಗಳು ಶಾಕ್‌. ಸಣ್ಣ ನೀರಾವರಿ ಇಲಾಖೆಯ ಇಇ ಮನೆಯಲ್ಲಿ ಪತ್ತೆಯಾದ ಅಪಾರ ಪ್ರಮಾಣ ದುಡ್ಡು ಚಿನ್ನಾಭರಣ ಕಂಡು ಎಸಿಬಿ ಅಧಿಕಾರಿಗಳು ಶಾಕ್‌ ಆಗಿದ್ದಾರೆ. ಇಇ ದೇವರಾಜ್ ಶಿಗ್ಗಾಂವಿ ಮನೆಯಲ್ಲಿ  ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ.  ಇವುಗಳ ಜೊತಗೆ 27 ಎಕರೆ ಆಸ್ತಿ ಖರೀದಿ ಮಾಡಿದ ದಾಖಲೆಗಳು ಹಾಗೂ ಅಪಾರ ಪ್ರಮಾಣದ ಚೆಕ್ ಬುಕ್ ಕೂಡಾ ದೇವರಾಜ್ ಮನೆಯಲ್ಲಿ ಪತ್ತೆ‌ಯಾಗಿದ್ದು, ಇನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

About Author

Priya Bot

Leave A Reply