ರೈತ  ಮಾಡಿದ ಉಪಾಯಕ್ಕೆ ಎಸಿಬಿ ಬಲೆಗೆ ಬಿದ್ದ ಸರ್ವೇಯರ್

0

ಯಾದಗಿರಿ

ಲಂಚ ಪಡೆಯುವಾಗ ಸರ್ವೇಯರ್ ಎಸಿಬಿ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಯಾದಗಿರಿಯಲ್ಲಿ  ನಡೆದಿದೆ. ಯಾದಗಿರಿಯ ಹುಣಸಗಿಯ ರವಿಕುಮಾರ್ ಲಂಚ ಪಡೆಯುವಾಗ ಎಸಿಬಿ ಬಲೆಬಿದ್ದ ಸರ್ವೇಯರ್. ಈ ಸರ್ವೆಯರ್  ರವಿಕುಮಾರ್ ರೈತ  ಮಹಾದೇವಪ್ಪ ಬಡಿಗೇರ್ ಎಂಬುವರ ಜಮೀನು ವಾಟನಿ ಮಾಡುವ ಸಲುವಾಗಿ ಎರಡು ಲಕ್ಷ 50 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ. ಅದರಂತೆ ಊರಾ ಆಚೆ ಇರುವ ಹುಣಸಿಗಿ ಕ್ರಾಸ್ ಬಳಿ ಹಣ ತಂದು ಕೊಡುವಂತೆ ಹೇಳಿದ್ದ, ಹೀಗಾಗಿ ರೈತ ಮಹದೇವಪ್ಪಾ. ಹಣ ತೆಗೆದುಕೊಂಡು ಹಣಗಿ ಕ್ರಾಸ್ ಬಳಿ ಹೋಗಿದ್ದಾರೆ.

ಆಗ ರವಿಕುಮಾರ್ ಅವರಿಗೆ ಹಣ ಕೊಡುವಾಗ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗ ಬಿದಿದ್ದಾನೆ.  ಸಂಜೆಯ ವೇಳೆಗೆ ಹುಣಸಗಿಯ ಕ್ರಾಸ್ ಗೆ ತೆರಳಿದ್ದ ರವಿಕುಮಾರ್ ರೈತನಿಂದ ನಡುರಸ್ತೆಯಲ್ಲಿ ಲಂಚ ಪಡೆಯುವಾಗ ರೆಡ್‌ಹ್ಯಾಂಡ್ ಆಗಿ  ಎಸಿಬಿ ಕೈಗೆ ಸಿಕ್ಕಿಬಿದ್ದಿದ್ದಾನೆ. ಸದ್ಯ ಲಂಚ ಪಡೆದ ರವಿಕುಮಾರ್ ನ್ನನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆಗೆ ನಡೆಸಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply