ಬಳ್ಳಾರಿ-  ಅಕ್ರಮ ಆಸ್ತಿ ಗಳಿಕೆ ಆರೋಪದ ಅಡಿಯಲ್ಲಿ  ವಿಮ್ಸ್ ನ ಮಾಜಿ ನಿರ್ದೇಶಕರಾಗಿದ್ದ ಡಾ.ವಿ.ಶ್ರೀನಿವಾಸ ಅವರ ಬಳ್ಳಾರಿಯ ಮನೆ – ಕೊಪ್ಪಳ ಜಿಲ್ಲೆಯ ಕಿಮ್ಸ್ ಆಸ್ಪತ್ರೆಯ ಕಚೇರಿ ಮೇಲೆ ಈ ದಿನ ಬೆಳ್ಳಂಬೆಳ್ಳಿಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬಳ್ಳಾರಿ ಎಸಿಬಿ ಡಿವೈಎಸ್ಪಿ ಚಂದ್ರಶೇಖರ ಪೂಜಾರಿ ಅವರ ನೇತೃತ್ವದಲ್ಲಿ ಬಳ್ಳಾರಿ ನಗರದ ಹೊಸಪೇಟೆ ರಸ್ತೆ ಬಳಿ ಇರುವ ಪಿಕಾಕ್ ಬಾರ್ ಹಿಂಭಾಗದಲ್ಲಿರುವ ಡಾ.ವಿ.ಶ್ರೀನಿವಾಸ ಅವರ ಮನೆ ದಾಳಿ ನಡೆಸಿ ಕಡತಗಳ ಪರಿಶೀಲನೆ ಕಾರ್ಯ‌ ನಡೆದಿದೆ.

ಡಾ. ವಿ.ಶ್ರೀನಿವಾಸ ಅವರು ವಿಮ್ಸ್ ಆಸ್ಪತ್ರೆಯ ಮಾಜಿ ನಿರ್ದೇಶಕರಾಗಿದ್ದರು. ಸದ್ಯ ಕೊಪ್ಪಳದ ಕಿಮ್ಸ್ ಆಸ್ಪತ್ರೆ ಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ‌. ಡಾ.ಶ್ರೀನಿವಾಸ ಅವರು ಅಕ್ರಮ ಆಸ್ತಿ ಗಳಿಕೆ‌ ಮಾಡಿದ್ದಾರೆಂಬ ದೂರು ಬಂದಿದ್ದ ಹಿನ್ನೆಲೆಯಲ್ಲಿ  ಎಸಿಬಿ ಅಧಿಕಾರಿಗಳು ಈ ದಾಳಿ‌ ಕಾರ್ಯಾಚರಣೆ ನಡೆಸಿದ್ದಾರೆ. ಎಸಿಬಿ ಅಧಿಕಾರಿಗಳಿಂದ ಶ್ರೀನಿವಾಸ ಅವರ ಮನೆಯಲ್ಲಿ ಶೋಧ ಕಾರ್ಯ ನಡೆದಿದೆ.

About Author

Priya Bot

Leave A Reply