ಸಾಧನೆ ಮಾಡಿದ ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ಸನ್ಮಾನ

0

ವಿಜಯಪುರ –

17 ವರ್ಷ ಹಿಂದೆ ಶಿಕ್ಷಣ ಕಲಿಸಿದ ಗುರುಗಳಿಗೆ  ವಿದ್ಯಾರ್ಥಿಗಳೆಲ್ಲ ಸೇರಿ ಸನ್ಮಾನ ಸಮಾರಂಭ ಮಾಡಿದರು.  ಶಿಕ್ಷಕರಿಂದ ದೈಹಿಕ ಶಿಕ್ಷಣ ಕಲಿತು  ಆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಳೆವಿದ್ಯಾರ್ಥಿಗಳಿಂದ ದೈಹಿಕ ಶಿಕ್ಷಕರಿಗೆ  ಅಭಿನಂದನ ಕಾರ್ಯಕ್ರಮ ನಡೆಯಿತು.

ವಿಜಯಪುರ  ನಗರದ L, E, S, ಶಾಲೆಯಲ್ಲಿ ಎಂಪಿ ಕುಪ್ಪಿ  ದೈಹಿಕ ಶಿಕ್ಷಕರ ನೇತೃತ್ವದಲ್ಲಿ2003 – 2004 ನೇ ಸಾಲಿನ ದೈಹಿಕ ಶಿಕ್ಷಣದ,  ಗೆಳೆಯರ ಬಳಗದ ವತಿಯಿಂದ, ಶ್ರೀ ಸಿದ್ದೇಶ್ವರ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಶಿಕ್ಷಕರ ಸಮ್ಮುಖದಲ್ಲಿ  ದೈಹಿಕ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ  ಮಾಡಿದ  ಹಳೆಯ ವಿದ್ಯಾರ್ಥಿಗಳಿಂದ  ಗುರುಗಳಿಗೆ ಸನ್ಮಾನ ಸಮಾರಂಭ  ನಡೆಯಿತು. ಈ ಕಾರ್ಯಕ್ರಮದಲ್ಲಿ ಸುಮಾರು 25 ಜನ ಹಳೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಹಳೆಯ ವಿದ್ಯಾರ್ಥಿಗಳನ್ನು ಸಂಘಟನೆ ಮಾಡುವುದರಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು.  ದೈಹಿಕ ಶಿಕ್ಷಕರ ನೇಮಕಾತಿ ಇನ್ನು ಕೂಡ ಆಗದೆ ಇರುವುದಕ್ಕೆ ಪೂರ್ವಭಾವಿ ಸಭೆ ಮಾಡಿ ಸಂಘಟನೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ  ಎಂದು ಹಳೆವಿದ್ಯಾರ್ಥಿಗಳು ಹೇಳಿದ್ದಾರೆ.

2003ರಲ್ಲಿ ಕಲಿತು ಹೋದ ವಿದ್ಯಾರ್ಥಿಗಳಿಂದ  ಸನ್ಮಾನ ಸಮಾರಂಭದಲ್ಲಿ  ಪಾಲ್ಗೊಂಡ ಎಂಪಿ ಕುಪ್ಪಿ ಅವರು ಮಾತನಾಡಿ  ಬಿ ಎಲ್ ಡಿ ಸಂಸ್ಥೆಯಲ್ಲಿ  ಸಿಪಿಎಡ್  ಕಾಲೇಜ್  1980 ರಲ್ಲಿ ಪ್ರಾರಂಭವಾಗಿ  ಕಲಿತುಹೋದ  ಎಲ್ಲ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಸಂಘಟನೆ ಪ್ರಾರಂಭಿಸಿದ್ದೇವೆ.  ಮುಂಬರುವ ದಿನಗಳಲ್ಲಿ ಕಾಲೇಜಿನಲ್ಲಿ ಓದಿದ್ದ ಎಲ್ಲ ವಿದ್ಯಾರ್ಥಿಗಳನ್ನು ಒಂದು ಕಡೆ ಕೂಡಿಸಿ  ದೊಡ್ಡಮಟ್ಟದಲ್ಲಿ ದೈಹಿಕ ಶಿಕ್ಷಕರ ಸಲುವಾಗಿ ಹೋರಾಟ ಮಾಡುವ ಸಂಘಟನೆಯ ರೂಪಿಸುವ ಗುರಿ ಹೊಂದಿದ್ದೇವೆ ಎಂದು  ದೈಹಿಕ ಶಿಕ್ಷಕರಾದ ಎಂಪಿ ಕುಪ್ಪಿ ಅವರು ಹೇಳಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply