ಬೆಂಗಳೂರು-  ಕನ್ನಡದ ಹೆಸರಾಂತ ಸಿನಿಮಾ ನಟಿಯೊಬ್ಬರು ನೂತನ ಜಾಲನ್ ಆರಂಭ ಮಾಡಿದ್ದಾರೆ. ಮಾರ್ಚ್ 8 ರಂದು ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ನೂತನ ಚಾನಲ್ ಆರಂಭ ಮಾಡುವ ಮೂಲಕ ತಮ್ನ ಅನಿಸಿಕೆ ಅಭಿಪ್ರಾಯ ಹಂಚಿಕೊಳ್ಳಲಿದ್ದಾರಂತೆ.

ಅಷ್ಟಕ್ಕೂ ಆ ನಟಿ ಯಾರು ಎನ್ನುವ ಕುತೂಹಲ ಎಲ್ಲರಿಗೂ ಕಾಡುತ್ತಿದೆ. ಹೌದು ಕಳೆದ ಮೂರು ತಿಂಗಳಿಗೂ ಹೆಚ್ಚು ಕಾಲ ಜೈಲ ವಾಸ ಅನುಭವಿಸಿ ಬಂದ ರಾಗಿಣಿ ದ್ವಿವೇದಿ. ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿ ಬಂದ ಬಳಿಕ ತಮ್ಮನ್ನು ತಾವು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರು ರಾಗಿಣಿ ಅವರು ಇದರ ನಡುವೆಯೇ ರಾಗಿಣಿ ತಮ್ಮದೇ ಹೆಸರಿನಲ್ಲಿ ಯುಟ್ಯೂಬ್‌ ಚಾನೆಲ್‌ ಪ್ರಾರಂಭ ಒಂದನ್ನು ಆರಂಭ ಮಾಡಿದ್ದಾರೆ. ಮಾ. 8 ರಂದು ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ರಾಗಿಣಿ ದ್ವಿವೇದಿ ಯು-ಟ್ಯೂಬ್‌ ಚಾನೆಲ್‌ ಆರಂಭಿಸಿದ್ದಾರೆ. ಇಷ್ಟು ದಿನ ತಮ್ಮ ಫೇಸ್ ಬುಕ್ ನಲ್ಲಿ ಹೊಸ ರುಚಿಯ ಅಡುಗೆ ಮಾಡುವ ಮೂಲಕ ರಾಗಿಣಿ ಮನೆ ಮಾತಾಗಿದ್ದರು. ಆದ್ರೆ ಈಗ ಯು- ಟ್ಯೂಬ್ ಚಾನಲ್ ನಲ್ಲಿ ಕೊಂಚ ಭಿನ್ನ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರಂತೆ 

ತಮ್ಮ ಚಾನೆಲ್‌ ಮೂಲಕ ರಾಗಿಣಿ ಇಲ್ಲಿಯವರೆಗೆ ಎಲ್ಲೂ ಹೇಳಿಕೊಳ್ಳಲು ಆಗಿರದ ತಮ್ಮ ಆಸಕ್ತಿ, ಅನಿಸಿಕೆ, ಅಭಿರುಚಿ ಎಲ್ಲವನ್ನೂ ಹಂಚಿಕೊಳ್ಳುವ ಯೋಚನೆ ಮಾಡಿದ್ದಾರಂತೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

 

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply