ಬೆಳಗಾವಿ- ಗಣಿ ನಾಡು ಬಳ್ಳಾರಿ ಜಿಲ್ಲೆ ಈಗಾಗಲೇ ಎರಡು ಹೋಳಾಗಿ ಹರಿದು ಹಂಚಲಾಗಿದೆ. ಈ ಮಧ್ಯ ಮತ್ತೊಂದು ಜಿಲ್ಲೆಯಯನ್ನು ವಿಭಜನೆ ಮಾಡುವ ಕೂಗು ಈಗ ಮತ್ತೆ ತಾರಕಕ್ಕೆ ಏರುವ ಲಕ್ಷಣಗಳು ಗೋಚರವಾಗಿವೆ. ಬಳ್ಳಾರಿ ಜಿಲ್ಲೆಯನ್ನು ಈಗಾಗಲೇ ಎರಡು ಭಾಗವಾಗಿ ಹರಿದು ಹಂಚಲಾಗಿದೆ. ಈ ಮಧ್ಯೆ ಕುಂದಾ ನಗರಿ ಬೆಳಗಾವಿಯನ್ನು ಸಹ ವಿಭಜನೆ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಗೋಕಾಕ್ ತಾಲೂಕನ್ನು ಜಿಲ್ಲೆಯನ್ನಾಗಿ ಮಾಡಲು ನಮ್ಮದೇನು ಯಾವುದೇ ತಕರಾರಿಲ್ಲ. ಆದಷ್ಟು ಬೇಗ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳ ಬೇಡಿಕೆ ಇದು, ಈ ಬೇಡಿಕೆ ಇಂದು ನಿನ್ನೆಯದಲ್ಲಾ ಕಳೆದ ಹತ್ತು ವರ್ಷಗಳಿಂದ ಇಲ್ಲಿನ ಜನರು ಹೋರಾಟ ಮಾಡಿದ್ದಾರೆ. ಬೆಳಗಾವಿ ಜಿಲ್ಲೆ ವಿಭಜನೆ ಮಾಡಿ ಗೋಕಾಕ್ ತಾಲೂಕನ್ನು ಜಿಲ್ಲೆಯನ್ನಾಗಿ ಮಾಡಲು ನಮ್ಮ ಸರ್ಕಾರ ಇದ್ದಾಗಲೂ ಹೇಳಿದ್ದೆವು. ಸದನದಲ್ಲೂ ಸಾಕಷ್ಟು ಬಾರಿ ಜಿಲ್ಲೆ ಮಾಡಬೇಕೆಂದು ನಾನೂ ಆಗ್ರಹಮಾಡಿದ್ದೆ. ಗೋಕಾಕ್ ಜಿಲ್ಲೆ ಆದ್ರೆ ಒಳ್ಳೆಯದು. ಆ ಶ್ರೇಯಸ್ಸು ರಮೇಶ್ ಅವರಿಗೆ ಸಲ್ಲುತ್ತದೆ ಎಂದರು..

suddinow.com
suddinow.com