ಬೆಂಗಳೂರು ‌- ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಪ್ರಾರಂಭವಾಗಿದೆ. ದಿನ ಕಳೆದಂತೆ ನೋಡುಗರ ಗಮನವನ್ನು ಸೆಳೆಯುತ್ತಿದೆ.
ಈ ವಾರ ಕ್ಯಾಪ್ಟನ್ ಆಯ್ಕೆಗಾಗಿ ಬಿಗ್ ಬಾಸ್ ನೀಡಿದ ಟಾಸ್ಕ್ ಎಲ್ಲರಿಗೂ ಶಾಕ್ ಕೊಟ್ಟಿತು. ಏಕೆಂದರೆ ಅದು ಕಳೆದ ವರ್ಷ ಈಡೀ ಜಗತ್ತು ಕೊರೊನಾದಿಂದ ತುತ್ತಾಗಿತ್ತು. ಅದನ್ನೇ ಬಿಗ್ ಬಾಸ್ ಮನೆಯಲ್ಲಿ‌‌ ಆಟಕ್ಕೆ  ಪರಿವರ್ತನೆ ಮಾಡಲಾಯಿತು.

ಬಿಗ್ ಬಾಸ್ ಮನೆಯಲ್ಲಿ ದ್ದ ೧೨ ಸ್ಪರ್ಧಿಗಳಲ್ಲಿ ೮ ಜನರಂತೆ ಎರಡು ತಂಡಗಳಾಗಿ ರಚಿಸಿದ್ದರು, ಅದರಲ್ಲಿ ಒಂದು ತಂಡ ಮನುಷ್ಯರದು ಇನ್ನೊಂದು ತಂಡ ವೈರಸ್ ತಂಡ ಎಂದು ನಾಮಕರಣ ಮಾಡಲಾಗಿತ್ತು. ಮನುಷ್ಯ ತಂಡದ ಸದಸ್ಯರು ಚೆನ್ನಾಗಿಯೇ ಆಟವನ್ನು ಆಡುತ್ತಿದ್ದರು, ಆದರೆ ವೈರಸ್ ತಂಡದವರು ಪದೇ ಪದೇ ಮನುಷ್ಯ ತಂಡದವರ ಮೇಲೆ ಆಪಾಧನೆ ಮಾಡುತ್ತಾ, ಕೊನೆಗೆ ನಾವು ಆಟ ಆಡುವುದಿಲ್ಲವೆಂದು ಹಿಂದೆ ಸರಿದರು.

ನಂತರ ಎರಡೂ ತಂಡಗಳ ಕ್ಯಾಪ್ಟನ್ ಚರ್ಚಿಸಿ ಆಟವನ್ನು ಮುಂದುವರೆಸಿದರು. ಆದರೆ ಮತ್ತೆ ವೈರಸ್ ತಂಡದ ಇಬ್ಬರು ಸ್ಪರ್ಧಿಗಳು , ನಿಧಿ ಸುಬ್ಬಯ್ಯ ಮತ್ತು ದಿವ್ಯಾ ಸುರೇಶ್ ಅವರು ಆಟವನ್ನು ಸ್ಪೋಟಿವ್ ಆಗಿ ಆಡಲಿಲ್ಲ, ಬಿಗ್ ಬಾಸ್ ಲ್ಯಾಬ್ ನಲ್ಲಿ ಚಿಕಿತ್ಸೆ ಆರಂಭದ ಸದ್ದು ಮೋಳಗಿದ ತಕ್ಷಣವೇ ಈ ಇಬ್ಬರಯ ಸ್ಪರ್ಧಿಗಳು ಸುಮ್ಮ ಸುಮ್ಮನೇ ಆಟವನ್ನು ಬಿಟ್ಟುಕೊಟ್ಟರು. ಈ ಕಾರಣದಿಂದ ಎರಡೂ ತಂಡಗಳು, ಎರಡು ದಿನ ಕಷ್ಟ ಪಟ್ಟು ಮಾಡಿದ ಪ್ರಯತ್ನವನ್ನು ಬಿಗ್ ಬಾಸ್ ರದ್ದುಗೊಳಿಸಿದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply