ವಿಜಯನಗರ- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿರುವ,2020ನೇ ಸಾಲಿನ “ಕನ್ನಡ ರಾಜ್ಯ್ರೋತ್ಸವ ಪ್ರಶಸ್ಥಿ”ಗೆ ಭಾಜನವಾಗಿರುವ.ಶ್ರೀಊರಮ್ಮ ದೇವಿ ಮಾಜಿ ದೇವದಾಸಿಯರ ಮಹಿಳಾ ಚಿಕ್ಕಿ ಘಟಕದಲ್ಲಿ, ಅಧ್ಯಕ್ಷರಿಂದ ಅವ್ಯವಹಾರ ನಡೆದಿದೆ ಎಂಬ ಆರೋಪವನ್ನು ಸಂಘದ ಸದಸ್ಯರು ಮಾಡಿದ್ದಾರೆ. ಹಲವಾರು ದಿನಗಳಿಂದ ಸಂಘದ ಅಧ್ಯಕ್ಷರು ಸಂಘದಲ್ಲಿ ಅವ್ಯವಹಾರ ಮಾಡಿದ್ದಾರೆ. ಹೀಗಾಗಿ ಕೂಡಲೇ ಅಧ್ಯಕ್ಷರನ್ನು ವಜಾ ಮಾಡುವಂತೆ ಆಗ್ರಹ ಮಾಡಿದ್ದಾರೆ.

ಈ ಹಿಂದೆ ಇದ್ದ ಬಳ್ಳಾರಿ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಅವರು ಮುತುವರ್ಜಿಯಿಂದ ಚಿಕ್ಕಿ ಘಟಕ ಮಾಡಿಕೊಟ್ಟು , ಇದಕ್ಕಾಗಿ ಪ್ರತ್ಯೇಕ ಸಂಘ ಸ್ಥಾಪನೆ ಮಾಡುವ ಮೂಲಕ ದೇವದಾಸಿಯರು ಸ್ವಾವಲಂಬಿ ಜೀವನ ನಡೆಸಲು ಅನುವು ಮಾಡಿಕೊಟ್ಟಿದ್ದರು. ಆದ್ರೆ ಈಗ ಸಂಘದಲ್ಲಿ ಅವ್ಯವಹಾರದ ಆರೋಪ ಕೇಳಿ ಬಂದಿದೆ. ಹೀಗಾಗಿ  ಸದಸ್ಯರಿಂದ ತಹಶಿಲ್ದಾರಿಗೆ ಕ್ರಮಕ್ಕಾಗಿ ಮನವಿ ಪತ್ರ ಸಲ್ಲಿಸಿದ್ದಾರೆ, ಹಾಲಿ ಇರೋ ಅಧ್ಯಕ್ಷೆಯನ್ನ ವಜಾಗೊಳಿಸಲು ಕ್ರಮಕ್ಕೆ ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ಚಿಕ್ಕಿ ಘಟಕದ ಕೆಲ ಸದಸ್ಯರು ಮತ್ತಿತರಿರು ಇದ್ದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply