ಮಂಗಳೂರು – ಮಂಗಳೂರು ನಗರದಲ್ಲಿ ನಾಯಿಯನ್ನು ಬೈಕಿಗೆ ಕಟ್ಟಿ ಎಳೆದೊಯ್ದ ಮತ್ತೊಂದು ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ಮನೆಯ ಹೊರಗಿದ್ದ ಚಪ್ಪಲಿಯನ್ನು ಕಚ್ಚಿದ್ದ ಕೋಪಕ್ಕೆ ನಾಯಿಯನ್ನು ಬೈಕ್​ಗೆ ಕಟ್ಟಿ ಎಳೆದುಕೊಂಡು ಹೋದ ಅಮಾನವೀಯ ಘಟನೆ ಮಂಗಳೂರು ನಗರದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಅಪ್ರಾಪ್ತ ಸೇರಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.

ಮಂಗಳೂರು ನಗರದಲ್ಲಿರುವ ವೈದ್ಯರೊಬ್ಬರ ಮನೆಯಲ್ಲಿ ಕೆಲಸಕ್ಕಿರುವ ಕಲಬುರಗಿ ಮೂಲದ ಈರಯ್ಯ ಬಸಯ್ಯ ಹಿರೇಮಠ್ ಈ ಕೃತ್ಯ ಎಸಗಿದ ವ್ಯಕ್ತಿ. ವೈದ್ಯರ ಮನೆಯ ಹೊರಗೆ ಇದ್ದ ಚಪ್ಪಲಿಯನ್ನು ನಾಯಿ ಕಚ್ಚಿದೆ. ಅದಕ್ಕೆ ಈರಯ್ಯ ಅದನ್ನು ಬೈಕ್​ಗೆ ಕಟ್ಟಿ ತನ್ನ ಮಗನ ಸಹಾಯದೊಂದಿಗೆ ಎಳೆದೊಯ್ದಿದ್ದಾನೆ‌. ಇದು ಮೇರಿಹಿಲ್ ನ ಅಪಾರ್ಟ್​ಮೆಂಟ್ ಒಂದರ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಿಸಿಟಿವಿ ದೃಶ್ಯ ಆಧಾರದ ಮೇಲೆ ಎನಿಮಲ್ ಕೇರ್ ಟ್ರಸ್ಟ್ ಸದಸ್ಯರು ಡಿಸಿಪಿಗೆ ಮಾಹಿತಿ ನೀಡಿದ್ದರು, ಕಾವೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾತ್ರಿ ವೇಳೆ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು, ಆತನ ಮೇಲೆ ಪ್ರಾಣಿ ಹಿಂಸೆ ಕಾಯ್ದೆಯಡಿ ಮತ್ತು ಲಾಕ್ ಡೌನ್ ವೇಳೆ ಅವಶ್ಯಕತೆ ಇಲ್ಲದೆ ವಾಹನ ಬಳಸಿರುವ ಹಿನ್ನೆಲೆ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ ಉಲ್ಲಂಘನೆಯಡಿ ಪ್ರಕರಣ ದಾಖಲಿಸಿದ್ದಾರೆ. ಒಂದೂವರೆ ತಿಂಗಳ ಹಿಂದೆ ಸುರತ್ಕಲ್ ಬಳಿ ಬೈಕ್‌ಗೆ ನಾಯಿಯನ್ನು ಕಟ್ಟಿ ಎಳೆದಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply