ಇಸ್ಲಮಾಬಾದ್- ಸಾಮಾನ್ಯಾಗಿ ನಾವು ಪಾಕಿಸ್ತಾನದ ಸುದ್ದಿಗಳನ್ನು ನೋಡುವಾಗ ಒಂದು ಭಾರತಿ ಸೈನಿಕರ ಮೇಲಿನ ದಾಳಿ ಇಲ್ಲವೇ ಪಾಕಿಸ್ತಾನದಲ್ಲಿ ಇರುವ ಹಿಂದುಗಳೂ ಹಾಗೂ ಹಿಂದು ದೇವಾಲಯದ ನಾಶ ಈ ಎರಡು ಸುದ್ದಿಗಳನ್ನು ಹೆಚ್ಚಾಗಿ ನೋಡುತ್ತೆವೆ. ಆದ್ರೆ ಈ ಭಾರಿ ಪಾಕಿಸ್ತಾನದಿಂದ ಅಚ್ಚರಿಯ ಸುದ್ದಿಯೊಂದು ಹೊರಬಂದಿದೆ.

ಹೌದು ಪಾಕಿಸ್ತಾನದ ಉದ್ರಿಕ್ತರ ಗುಂಪಿನಿಂದ  ಧ್ವಂಸಗೊಂಡಿದ್ದ ಹಿಂದೂ ದೇವಾಲಯವನ್ನು ಪುನರ್ ನಿರ್ಮಿಸುವುದಾಗಿ ಪಾಕಿಸ್ತಾನ ಸ್ಥಳೀಯ ಸರ್ಕಾರ ಹೇಳಿದೆ. ಪಾಕಿಸ್ತಾನದಲ್ಲಿ ಇರುವ ಅನೇಕ ಹಿಂದು ಹಾಗೂ ಬೌದ್ಧ ದೇವಾಳಯಗಳನ್ನು ಈಗಾಗಲೆ ಹಾಳು ಮಾಡಲಾಗಿದೆ. ಆದ್ರೆ ಕಳೆದ ಮೂರು ದಿನಗಳ ಹಿಂದೆ  ಪಾಕಿಸ್ತಾನದ ಖೈಬರ್ ಫಂಖ್ತುಕ್ವಾ ಪ್ರಾಂತ್ಯದಲ್ಲಿ ಕೆಲವು ಸ್ಥಳೀಯ ಜನರು ಹಾಗೂ ಧರ್ಮ ಗುರುಗಳು ಸೇರಿಕೊಂಡು ಹಿಂದೂ ದೇವಾಲಯವನ್ನು ಧ್ವಂಸ ಮಾಡಿದ್ರು ಹಿಂದು ದೆವಾಲಯ ದ್ವಂಸ ಮಾಡಿ ಬೆಂಕಿ ಹಚ್ಚಿರುವ ವಿಡಿಯೋ ಹಾಗೂ ಪೋಟೋಗಳು ಸಾಮಾಜಿಕ ಜಾಲತಾನದಲ್ಲಿ ಸಾಕಷ್ಟು ವೈರಲ್ ಆಗಿವೆ. ಅಲ್ಲದೇ ಇದೇ ಕಾರಣಕ್ಕೆ ಸಾಮಾಜಿಕ ಜಾಲತಾನದಲ್ಲಿ ಪಾಕಿಸ್ತಾನದ ವಿರುದ್ದ ಅನೇಕರು ಆಕ್ರೋಶ ಹೊರ ಹಾಕಿದ್ದಾರೆ. ಇದೇ ಕಾರಣಕ್ಕೆ ಅಲ್ಲಿನ ಸ್ಥಳಿಯ ಸರ್ಕಾರ ದೇವಾಲಯವನ್ನು ಮರು ನಿರ್ಮಾಣ ಮಾಡುವುದುಗಿ ಹೇಳಿಕೊಂಡಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿ. ಆದ್ರೆ ಪಾಕಿಸ್ತಾದಸ್ಥಳಿಯ ಸರ್ಕಾರ ಕೇವಲ ತನ್ನ ಹೇಳಿಕೆ ಬಿಡುಗಡೆ ಮಾಡಿದ್ದು ಆದ್ರೆ ನಿಜಕ್ಕೂ ದೇವಾಲಯ ನಿರ್ಮಾಣ ಆಗುತ್ತದೆ ಎಂಬುದನ್ನು ಅನೇಕ ಜನರು ಕಾತುರದಿಂದ ಎದುರು ನೋಡುತಿದ್ದಾರೆ.

Leave A Reply