ಹುಬ್ಬಳ್ಳಿ: ಶಾಮಿಯಾನ ಹಾಕುವಾಗ ವಿದ್ಯುತ್ ತಂತಿಗೆ ಕಬ್ಬಿಣದ ಪೈಪ್ ತಗುಲಿ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್ ಗ್ರಾಮದಲ್ಲಿ ನಡೆದಿದೆ. ಹೌದು…ಮೃತ ವ್ಯಕ್ತಿಯನ್ನು 28 ವರ್ಷದ ಕರೆಪ್ಪ ಸಾತಪ್ಪ ಚಲವಾದಿ ಎಂದು ಗುರುತಿಸಲಾಗಿದೆ. ಇವರು ಹುಬ್ಬಳ್ಳಿ ತಾಲೂಕಿನ ಕುಸುಗಲ್ಲ ಗ್ರಾಮದ ಯಲ್ಲಪ್ಪ ಗುಡದೇರಿ ಎಂಬುವವರ ಶಾಮಿಯಾನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಇಂದು ಎಂದಿನಂತೆ ಕುಸುಗಲ್ಲ ಗ್ರಾಮದಲ್ಲಿ ಪೆಂಡಾಲ್ ಹಾಕುವಾಗ ಕಬ್ಬಿಣದ ಪೈಕ್ ವಿದ್ಯುತ್ ತಂತಿಗೆ ತಗುಲಿದೆ. ಈ ವೇಳೆ ಕರೆಪ್ಪ ಸಾತಪ್ಪ ಚಲವಾದಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

IMG-20210405-WA0024.jpg

Email

Sandesh Pawar

About Author

Sandesh Pawar

Leave A Reply