ಬೆಳಗಾವಿ-  ಬಿಜೆಪಿ ಸರ್ಕಾರ ಆಡಳಿತಕ್ಕೆ ದಕ್ಕೆ ಬಂದಾಗಿನಿಂದ ಸಚಿವ ಸಂಪುಟ ವಿಸ್ತರನೆ ಕಗ್ಗಂಟಾಗಿ ಉಳಿದಿತ್ತು. ಒಂದುವರೆ ವರ್ಷದ ಬಳಿಕ ಕೊನೆಗೂ ಸಚಿವ ಸಂಪುಟ ವಿಸ್ತರನೆಯಾಗಿದೆ. ಆದರೆ ಸಚಿವ ಸಂಪುಟ ವಿಸ್ತರನೆಯಾದ ಬೇನ್ನಲ್ಲೇ  ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ದಟ್ಟವಾಗಿ ಆವರಿಸಿದೆ. ಶತಾಯ ಗತಾಯ ಅಸಮಾಧಾನವನ್ನು ಸರಿಪಡಿಸಲೂ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಹರಸಾಹಸ ಪಟ್ಟರು ಶಮನವಾಗಿಲ್ಲ.

ಕೇಂದ್ರ ಸಚಿವ ಅಮಿತ್ ಶಾ ಅವರು ಇಂದು ಜನ ಸೇವಕ ಸಮಾವೇಶಕ್ಕೆ ಬೆಳಗಾವಿಗೆ ಆಗಮಿಸಿದ್ದರು ಈ ಸಂದರ್ಭದಲ್ಲಿ ಬಿಜೆಪಿ ಅತೃಪ್ತ ಶಾಸಕರು ಅಮಿತ್ ಶಾ ಅವರನ್ನು ಬೇಟಿ ಮಾಡಿದ್ದಾರೆ.  ಬೆಳಗಾವಿಯ ಸರ್ಕೀಟ್ ಹೌಸ್ ನಲ್ಲಿ ಅತೃಪ್ತ ಶಾಸಕರಾದ ಅರವಿಂದ ಬೆಲ್ಲದ, ಮಾಹಾದೇವಪ್ಪಾ ಯಾದವಾಡ ಸೇರಿದಂತೆ ಆನೇಕ ಶಾಸಕರು ಅಮಿತ್ ಶಾ ಅವರನ್ನ ಬೇಟಿ ಮಾಡಿದ್ದಾರೆ. ಅನೇಕ ಶಾಸಕರು ಅಮಿತ್ ಶಾ  ಅವರನ್ನು ಬೇಟಿ ಮಾಡಲೂ ಸರತಿ ಸಾಲಿನಲ್ಲಿ  ನಿಂತಿದ್ದರು, ಅಮಿತ್ ಶಾ ಅವರು ಅತೃಪ್ತ ಶಾಸಕರ ಅಹವಾಲನ್ನು ಸ್ವೀಕರಿಸಿದ್ದಾರೆ.

ಅತೃಪ್ತ ಶಾಸಕರು ತಮ್ಮ ಅಸಮಾಧಾನವನ್ನು ಅಮಿತ್ ಶಾ ಮುಂದೆ ಹೇಳಿಕೊಂಡರು.  ಶಾ ಅವರು ಅತೃಪ್ತ ಶಾಸಕರಿಗೆ ದೆಹಲಿಗೆ ಬನ್ನಿ ಮಾತನಾಡೊಣ ಎಂದು ಹೇಳಿದ್ದಾರೆ. ಹೀಗಾಗಿ ರಾಜ್ಯದಲ್ಲಿದ್ದ ಅಸಮಾಧಾನದ ಚೆಂಡು ಈಗ ದೆಹಲಿ ಅಂಗಳದಲ್ಲಿ ಇದೆ.

 

About Author

Priya Bot

Leave A Reply