ಪಾಲಿಕೆ ಚುನಾವಣೆ ಸೋಲಿಗೆ ಆನಂದ್ ಸಿಂಗ್ ಕಾರಣ

0

ಬಳ್ಳಾರಿ-  ರಾಜ್ಯ ಬಿಜೆಪಿ ಬೆಳವಣಿಗೆ ಕುರಿತು ತೀವ್ರ ಅಸಮಾಧಾನಬನ್ನು ಶಾಸಕ ಸೋಮಶೇಖರ ರೆಡ್ಡಿ ಅಸಮಾಧಾನ ಹೊರಹಾಕಿದ್ದಾರೆ. ಬಳ್ಳಾರಿಯಲ್ಲಿ ಇಂದು ಮಾತನಾಡಿದ ಅವರು, ಬಳ್ಳಾರಿಯಲ್ಲಿ ಮಾಡೋಕೆ ಬೇಕಾದಷ್ಟು ಕೆಲಸವಿದೆ ಬೆಂಗಳೂರಿಗೆ ಹೋಗಿ ಯಾರನ್ನು ಭೇಟಿಯಾಗಿ ಏನು ಮಾಡಲಿ, ಕೆಲವರಲ್ಲಿ ಅಸಮಧಾನ ಇರೋದು ನಿಜ ಆದ್ರೇ ಕೊರೋನಾ ಸಮಯದಲ್ಲಿ ಇದನ್ನು ವ್ಯಕ್ತಪಡಿಸೋ ಅವಶ್ಯಕತೆ ಇಲ್ಲ, ಸಿ ಎಮ್ ಬದಲಾವಣೆ ಮಾಡುವುದು ಬೇಡ ಯಡಿಯೂರಪ್ಪ ಅವರೇ ಇನ್ನೂ ಎರಡು ವರ್ಷಗಳ ಕಾಲ ಮುಂದುವರೆದ್ರೇ ಒಳ್ಳೆಯದು ಎಂದಿದ್ದಾರೆ. ಇನ್ನು ಇದೇ ವೇಳೆಯಲ್ಲಿ ಮಾತನಾಡಿದ ಅವರು,  ಸಚಿವ ಶ್ರೀರಾಮುಲು ಡಿಸಿಎಂ ಮತ್ತು ಬಳ್ಳಾರಿ ಉಸ್ತುವಾರಿಯಾಗ ಬೇಕು. ಇದು ಬಳ್ಳಾರಿ ಜನರ ಆಸೆಯಾಗಿದೆ ಎಂದಿದ್ದಾರೆ.

ಇನ್ನು ಸಚಿವ ಆನಂದ್ ಸಿಂಗ್ ವಿರುದ್ಧ ವಾಗ್ದಾಳಿ ಮಾಡಿದ ಅವರು ಆನಂದ ಸಿಂಗ್ ಉಸ್ತುವಾರಿ ಬದಲಾಣೆ ಆಗೋವರೆಗೂ‌ಬಿಬಿಡಲ್ಲ, ಉಗ್ರ ಹೋರಾಟ ಮಾಡಿಯಾದ್ರು ಬದಲಾವಣೆ ಮಾಡ್ತೇವೆ, ಜಿಲ್ಲೆ ವಿಭಜನೆ ಹಿನ್ನೆಲೆ ಕಾರ್ಪೋರೇಷನ್ ಚುನಾವಣೆಯಲ್ಲಿ ಸೋತೆವು. ಇದಕ್ಕೆ ನೇರವಾಗಿ ಆನಂದ ಸಿಂಗ್ ಕಾರಣ,  ಚುನಾವಣೆ ವೇಳೆ ಉಸ್ತುವಾರಿ ಬದಲಾವಣೆ ಮಾಡಿದ್ರೇ‌ ಪಾಲಿಕೆಯಲ್ಲಿ ಗೆಲ್ಲುತ್ತಿದ್ದೇವು ಎಂದು ಆನಂದ್ ಸಿಂಗ್ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply