ಹೊಸಪೇಟೆ- ವಿಜಯ ನಗರ ಜಿಲ್ಲೆಯನ್ನು ಬಳ್ಳಾರಿ ಜಿಲ್ಲೆಯಿಂದ ಪ್ರತೇಕ ಮಾಡಬೇಕು ಎನ್ನುವ ಹಾರಾಟ ಇಂದು ನಿನ್ನೆಯದಲ್ಲಾ, ಎಮ್ ಪಿ ಪ್ರಕಾಶ್ ಅವರ ಕಾಲದಿಂದಲೂ ಅಂದ್ರೆ ಸುಮಾರು ಇಪತ್ತು ವರ್ಷಗಳ ಹೋರಾಟದ ಇತಿಹಾಸ ಇದೆ. ಆದ್ರೆ ಅಂದು ರಾಜಕೀಯ ಇಚ್ಚಾಶಕ್ತಿಯ ಕೊರತೆಯಿಂದ ಜಿಲ್ಲೆಯ ಹೋರಾಟ ಎಲ್ಲಿ ಆರಂಭ ವಾಗಿತ್ತೋ ಅಲ್ಲಿಯೇ ನಿಂತು ಹೋಗಿತ್ತು. ಆದ್ರೆ ಸಚಿವ ಆನಂದ್ ಸಿಂಗ್ ಆ ಹೋರಾಟಕ್ಕೆ ರೆಕ್ಕೆ ಪುಕ್ಕ ಕಟ್ಟಿ ಕಂಡ ಕಂಡವರನ್ನು ಬೇಟಿ ಮಾಡಿ ಮನವಿ ಮಾಡಿ ಜಿಲ್ಲಾ ವಿಭಜನೆ ಮಾಡುವಲ್ಲಿ ಸಫಲರಾಗಿದ್ದಾರೆ. ಜಿಲ್ಲಾ ವಿಭಜನೆಯ ಹೋರಾಟವನ್ನು ಈಗೀನ ಸಚಿವ ಆನಂದ್ ಸಿಂಗ್ ಆರಂಭ ಮಾಡಿದಲ್ಲಾ ಬದಲಾಗಿ ಈ ಹೋರಾಟಕ್ಕೆ 20 ವರ್ಷಗಳ ಇತಿಹಾಸ ಇದೆ. ಹೌದು 2007ರಲ್ಲಿ ಮೊದಲ ಬಾರಿಗೆ ವಿಜಯನಗರ ಜಿಲ್ಲೆಯನ್ನು ರಚನೆ ಮಾಡಬೇಕು ಎಂಬ ಕೂಗು ಕೇಳಿ ಬಂದಿತ್ತು. ಹೋರಾಟವೂ ಆರಂಭವಾಗಿತ್ತು. ಆದರೆ, ಪರ-ವಿರೋಧ ಹೋರಾಟ ಕೆಲವು ಕಾಲ ನಡೆದು, ಬಳಿಕ ಅದು ತಣ್ಣಗಾಗಿತ್ತು. 2018ರ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ವಿಜಯನಗರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ಆನಂದ್ ಸಿಂಗ್ ವಿಜಯನಗರ ಪ್ರತ್ಯೇಕ ಜಿಲ್ಲೆಯ ಹೋರಾಟವನ್ನು ಆರಂಭಿಸಿದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಅವರು ವಿಜಯನಗರ ಜಿಲ್ಲಾ ರಚನೆಯೇ ನನ್ನ ಗುರಿ ಎಂದು ಘೋಷಣೆ ಮಾಡಿದರು. 2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಜಿಲ್ಲಾ ವಿಚಾರವನ್ನೇ ಪ್ರಮುಖವಾಗಿಟ್ಟುಕೊಂಡು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದು ಬಂದರು. ಬಿಜೆಪಿ ಸರ್ಕಾರ ರಚನೆಯಾದಾಗ ಅರಣ್ಯ ಸಚಿವರೂ ಆದರು. ಜಿಲ್ಲಾ ರಚನೆ ಹೋರಾಟಕ್ಕೆ ಮತ್ತಷ್ಟು ಚುರುಕು ಮುಟ್ಟಿಸಿದರು.

ಅಂದಿನ ಆಡಳಿತ ರೂಡ ಕಾಂಗ್ರಸ್ ಹಾಗು ಜೆಡಿಎಸ್ ಮೈತ್ರಿ ಸರ್ಕಾರದ ಮುಂದೆ ಆನಂದ್ ಸಿಂಗ್ ಅವರು ಜಿಲ್ಲಾ ವಿಭಜನೆ ಮಾಡುವ ಬೇಡಿಕೆ ಮುಂದಿಟ್ಟರು. ಆದ್ರೆ ಆ ಬೇಡಿಕೆ ಯಾವಗ ಬೆಲೆ ಸಿಗಲಿಲ್ಲಾ ಎನ್ನುವುದು ಗೊತ್ತಾಗತ್ತೋ ಆಗ ಅಲ್ಲಿಂದ ಬಂದವರೇ ಹಿಂದೆ ಮುಂದೆ ಯೋಚನೆ ಮಾಡದೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು . ಜಿಲ್ಲಾ ವಿಭಜನೆಯ ಬೇಡಿಕೆ ಮುಂದಿಟ್ಟುಕೊಂಡು ಮತ್ತೆ ಬಿಜೆಪಿಗೆ ಸೇರ್ಪಡೆಯಾದ್ರು. ಬಳಿಕ ಮರು ಚುನಾವಣೆಯಲ್ಲಿ ಹೋದ ಬಂದಲ್ಲಿ ಎಲ್ಲರಲ್ಲಿ ಜಿಲ್ಲಾ ವಿಭಜನೆಯ ಕಿಚ್ಚು ಹಚ್ಚುವ ಮೂಲಕ ಗೆದ್ದು ಬಂದ್ರು. ಆದ್ರೆ ಗೆದ್ದ ಬಳಿಕ ಜಿಲ್ಲೆ ವಿಭಜನೆ ಮಾಡಲು ಒಪ್ಪಿಗೆ ಪಡೆಯುವದು ಅಷ್ಟು ಸುಲಭದ ಮಾತಗಾರಲಿಲ್ಲಾ. ನಿರಂತರ ಪ್ರಯತ್ನದಿಂದಾಗಿ ಅಂತಿಮವಾಗಿ ಜಿಲ್ಲಾ ವಿಭಜನೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಆದ್ರೆ ಸರ್ಕಾರ ಆಕ್ಷೇಪನೆ ಸಲ್ಲಿಕೆಗೆ ಕಾಲಾವಕಾಶ ನೀಡಿದ್ದು ಬಳಿಕ ಅಂತಿಮ ಆದೇಶ ಹೊರ ಬೀಳಲಿದೆ

Leave A Reply